ಕರ್ನಾಟಕ

karnataka

ETV Bharat / bharat

ಸ್ವಚ್ಛ ಭಾರತದತ್ತ ಮತ್ತೊಂದು ಹೆಜ್ಜೆ... ಮಣ್ಣಿನ ಕಪ್​ಗೆ ಕೇಂದ್ರದ ಉತ್ತೇಜನ..!

ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಚಹಾ ಹಾಗೂ ಕಾಫಿ ವಿತರಣೆಗೆ ಪ್ಲಾಸ್ಟಿಕ್​ ಕಪ್​ ಬದಲಾಗಿ ಮಣ್ಣಿನ ಕಪ್​​ಗಳಲ್ಲಿ ವಿತರಿಸಲು ಕೇಂದ್ರ ಚಿಂತನೆ ನಡೆಸಿದೆ.

ಮಣ್ಣಿನ ಕಪ್​

By

Published : Aug 26, 2019, 1:35 PM IST

ನವದೆಹಲಿ:ಸ್ವಚ್ಛ ಭಾರತದ ಪರಿಕಲ್ಪನೆಗೆ ಪೂರಕವಾಗಿ ರೈಲ್ವೆ ನಿಲ್ದಾಣ ಹಾಗೂ ಏರ್​ಪೋರ್ಟ್​ಗಳಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ರೈಲು ಹಾಗೂ ವಿಮಾನ ನಿಲ್ದಾಣಗಳಲ್ಲಿ ಚಹಾ ಹಾಗೂ ಕಾಫಿ ವಿತರಣೆಗೆ ಪ್ಲಾಸ್ಟಿಕ್​ ಕಪ್​ ಬದಲಾಗಿ ಮಣ್ಣಿನ ಕಪ್​​ಗಳಲ್ಲಿ ವಿತರಿಸಲು ಕೇಂದ್ರ ಚಿಂತನೆ ನಡೆಸಿದೆ.

ಭ್ರಷ್ಟರ ಪಾಲಿಗೆ ಮೋದಿ ಸರ್ಕಾರ ಸಿಂಹಸ್ವಪ್ನ... 22 ಅಧಿಕಾರಿಗಳಿಗೆ ಗೇಟ್​ಪಾಸ್..!

ಕೇಂದ್ರ ಸಚಿವ ನಿತಿನ್ ಗಡ್ಕರಿ ಹೊಸ ಆಲೋಚನೆಯನ್ನು ರಿವೀಲ್ ಮಾಡಿದ್ದು, ರೈಲು, ವಿಮಾನ ಹಾಗೂ ಬಸ್​ ನಿಲ್ದಾಣಗಳಲ್ಲಿ ಮಣ್ಣಿನ ಕಪ್​ ಮೂಲಕ ಚಹಾ ಹಾಗೂ ಕಾಫಿ ವಿತರಿಸುವ ಯೋಜನೆಯನ್ನು ಸಂಬಂಧಿಸಿದ ಇಲಾಖೆಗೆ ತಿಳಿಸಲಾಗಿದ್ದು, ಕಡ್ಡಾಯ ಮಾಡುವಂತೆ ಹೇಳಲಾಗಿದೆ ಎಂದಿದ್ದಾರೆ.

ಈಗಾಗಲೇ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್​ ದೇಶದ 100 ರೈಲು ಸ್ಟೇಷನ್​ನಲ್ಲಿ ಚಹಾ, ಕಾಫಿ ವಿತರಣೆಗೆ ಮಣ್ಣಿನ ಕಪ್​ ಕಡ್ಡಾಯಗೊಳಿಸಿದ್ದಾರೆ, ಇದನ್ನು ದೇಶದೆಲ್ಲೆಡೆ ವಿಸ್ತರಿಸುವಂತೆ ಸಚಿವರಿಗೆ ಹೇಳಿದ್ದಾಗಿ ನಿತಿನ್ ಗಡ್ಕರಿ ಹೇಳಿದ್ದಾರೆ. ಮಾಲ್​ಗಳಲ್ಲಿ ಸಹ ಇದನ್ನೇ ಅನುಸರಿಸಿದರೆ ಉತ್ತಮ ಎಂದು ಗಡ್ಕರಿ ಹೇಳಿದ್ದಾರೆ.

ABOUT THE AUTHOR

...view details