ಕರ್ನಾಟಕ

karnataka

ETV Bharat / bharat

370 ವಿಧಿ ರದ್ದತಿ ನಂತರ ಒಂದೂ ಗುಂಡು ಹಾರಿಲ್ಲ: ರಾಜ್ಯಪಾಲ ಮಲಿಕ್ ಸಮರ್ಥನೆ - 370 ವಿಧಿ ರದ್ದತಿ

ಚಲನಚಿತ್ರಗಳು ಕೇವಲ ನಿರುದ್ಯೋಗ, ಬಡತನ, ರೈತರ ಸಮಸ್ಯೆಗಳನ್ನು ತೋರಿಸುತ್ತೀರಿ, 370 ರದ್ದತಿಯ ಬಗ್ಗೆ, ಅದನ್ನು ಜನ ಸ್ವೀಕರಿಸಿದ ಬಗ್ಗೆಯು ಬೆಳಕು ಚೆಲ್ಲಬೇಕು ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿರ್ಮಾಪಕರಿಗೆ ಮನವಿ ಮಾಡಿದ್ದಾರೆ.

not-a-single-bullet-fired-in-j-k-since-abrogation-of-special-status-satya-pal-malik
ಸತ್ಯಾಪಾಲ್ ಮಲಿಕ್​

By

Published : Nov 29, 2019, 9:13 AM IST

ಪಣಜಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಹಿಂದಿನ ಜಮ್ಮು, ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.

ಸತ್ಯಾಪಾಲ್ ಮಲಿಕ್​

ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಇಲ್ಲಿ ಸಣ್ಣ ಅಶಾಂತಿ, ಗಲಾಟಿ ಉಂಟಾದರೂ ನೂರಾರು ಸಾವು, ನೋವು ಸಂಭವಿಸುತ್ತಿತ್ತು. 2010ರಲ್ಲಿ ಗಲಾಟೆಯಲ್ಲಿ 50 ಜನರು ಸಾವನ್ನಪ್ಪಿದ್ದರು. ಬುರ್ಹಾನ್​ ವಾನಿ ಸಮಸ್ಯೆಯಲ್ಲಿ 110 ಜನ ಮೃತಪಟ್ಟಿದ್ದರು. ಪ್ರತಿ ವಾರವೂ ಕ್ಷುಲ್ಲಕ ಕಾರಣಕ್ಕೆ ಅವಘಡಗಳು ಉಂಟಾಗುತ್ತಿದ್ದವು. ಆಗ ಜನರು ಪೊಲೀಸ್​ ಹಾಗೂ ಸಾರ್ವಜನಿಕ ಸ್ಥಳಗಳ ಮೇಲೆ ದಾಳಿ ಮಾಡುತ್ತಿದ್ದರು ಎಂದು ಹೇಳಿದರು.

ಒಂದೇ ಒಂದೂ ಗುಂಡು ಹಾರಿಲ್ಲ: ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಭದ್ರತಾ ಪಡೆ ಅಥವಾ ಪೊಲೀಸ್​ ತುಕಡಿಗಳಿಗೆ ಒಂದೇ ಒಂದು ಗುಂಡೂ ಹಾರಿಸಿಲ್ಲ. ಜನರ ಮಾನಸಿಕ ಸ್ಥಿತಿ, ಚಿಂತನೆ ಬದಲಾಗಿದೆ ಎಂದರು. ಈ ತಿಂಗಳ ಆರಂಭದಲ್ಲಿ ಗೋವಾದ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದ ಮಲಿಕ್, ತಮ್ಮಲ್ಲಿ ಇನ್ನೂ ಕಾಶ್ಮೀರದ "ಹ್ಯಾಂಗೊವರ್" ಇದೆ ಎಂದು ಹೇಳಿದರು.

ಆಗಸ್ಟ್ 5ರಂದು 370 ನೇ ವಿಧಿ ಅನ್ವಯ ಕೇಂದ್ರವು ತನ್ನ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮೊದಲು ಅಂದರೆ, ಜಮ್ಮು ಮತ್ತು ಕಾಶ್ಮೀರ ಕೇಂದ್ರ ಪ್ರದೇಶಗಳಾಗಿ ಮತ್ತು ಲಡಾಖ್ ಆಗಿ ವಿಭಜಿಸುವ ಮುಂಚೆ ಮಲಿಕ್​ ರಾಜ್ಯದ ಕೊನೆಯ ರಾಜ್ಯಪಾಲರಾಗಿದ್ದರು.

ಈದ್​ ಆಚರಣೆ ಬಿಟ್ಟಿಲ್ಲ: ಕಾಶ್ಮೀರ ಪೊಲೀಸರು ಹಾಗೂ ಅಧಿಕಾರಿಗಳು ಈದ್​ ಆಚರಣೆ ಕೈ ಬಿಟ್ಟಿಲ್ಲ. 370 ವಿಧಿ ವಿಶೇಷ ಸ್ಥಾನಮಾನ ಹಿಂತೆಗೆದ ನಂತರ ಈದ್​ ಆಚರಣೆಯಲ್ಲಿ ದಂಗೆ ಏಳುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿದ್ದರು. ಆ ಸಂದರ್ಭದಲ್ಲಿ ಯಾವ ಸೈನಿಕರು ರಜೆ ಕೇಳದೇ ಇರುವುದರ ಬಗ್ಗೆ ನನಗೆ ಹೆಮ್ಮೆ ಇದೆ ಎಂದು ಹೇಳಿದರು.

ನಿರುದ್ಯೋಗ, ಬಡತನ, ರೈತರು ಹಾಗೂ ಸೈನಿಕರ ಸ್ಥಿತಿ ಹೀಗೆ ಸಮಾಜದ ಇತರ ಸಮಸ್ಯೆಗಳನ್ನು ಎತ್ತಿ ತೋರಿಸುವ ಸಿನಿಮಾಗಳು, ಇಂತಹ ಪರಿಸ್ಥಿತಿಯನ್ನು ಬಿಚ್ಚಿಡಬೇಕಿದೆ ಎಂದು ಮಲಿಕ್ ಚಲನಚಿತ್ರ ನಿರ್ಮಾಪಕರಿಗೆ ಮನವಿ ಮಾಡಿದರು.ಪುಸ್ತಕ, ಚಿತ್ರ ಇತರ ಮಾಧ್ಯಮಗಳಿಗಿಂತ ಚಲನಚಿತ್ರ ಪ್ರಭಾವಿ ಮಾಧ್ಯಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details