ಕರ್ನಾಟಕ

karnataka

ETV Bharat / bharat

ವರ್ಷದ ಮೊದಲ ದಿನವೇ ಎಲ್​ಪಿಜಿ ಗ್ರಾಹಕರಿಗೆ ಕೇಂದ್ರದಿಂದ ಬಿಗ್​ ಶಾಕ್​

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ನೂತನ ವರ್ಷದ ಮೊದಲ ದಿನವೇ ಎಲ್​ಪಿಜಿ ಗ್ಯಾಸ್​​ನ ಪ್ರತಿ ಸಿಲಿಂಡರ್​ಗೆ ₹ 19 ಏರಿಸುವ ಮೂಲಕ​ ಬಳಕೆದಾರರಿಗೆ ಶಾಕ್​ ನೀಡಿದೆ.

Non-subsidised LPG price hiked by Rs 19 per cylinder
Non-subsidised LPG price hiked by Rs 19 per cylinder

By

Published : Jan 1, 2020, 2:51 PM IST

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಎನ್​ಡಿಎ ಸರ್ಕಾರ ನೂತನ ವರ್ಷದ ಮೊದಲ ದಿನವೇ ಎಲ್​ಪಿಜಿ ಗ್ರಾಹಕರಿಗೆ ಶಾಕ್​ ನೀಡಿದೆ. ಒಂದು ಸಿಲಿಂಡರ್​ಗೆ ₹ 19 ಏರಿಸಿದೆ.

ಅಲ್ಲದೆ, ವೈಮಾನಿಕ ಇಂಧನ (ಎಟಿಎಫ್‌) ದರದಲ್ಲೂ (ಸಾವಿರ ಲೀಟರ್​) 2.6 ರಷ್ಟು (1637.25 ರೂಪಾಯಿ) ಹೆಚ್ಚಿಸಿ ಆದೇಶ ಹೊರಡಿಸಿದೆ.

ಕೇಂದ್ರ ಸರ್ಕಾರ ಕಳೆದ ಐದು ತಿಂಗಳಿಂದ ಹಂತ, ಹಂತವಾಗಿ ಎಲ್​ಪಿಜಿ ದರವನ್ನು ₹ 139 ಏರಿಸಿದೆ. ಸಬ್ಸಿಡಿ ರಹಿತ ಅಡುಗೆ ಅನಿಲ 14.5 ಕೆ.ಜಿ.ಯುಳ್ಳ ಪ್ರತಿ ಸಿಲಿಂಡರ್​ಗೂ ₹ 19 ಏರಿಸಿದೆ. ಈ ಮೂಲಕ ಮೊದಲು ₹ 695 ರಷ್ಟಿದ್ದ ದರ ಈಗ ₹ 714 ತಲುಪಿದೆ.

ಕಳೆದ ವರ್ಷ ಜೂನ್​ನಿಂದ ಇಲ್ಲಿಯವರೆಗೂ ಪ್ರತಿ ಕಿಲೋ ಲೀಟರ್​ಗೂ ಹಂತ ಹಂತವಾಗಿ ದರ ಏರಿಸಿದೆ. ಪ್ರತಿ ಕಿಲೋ ಲೀಟರ್​ಗೆ 1,637.25 ರೂ ಏರಿಕೆಯಾಗುವ ಮೂಲಕ ಕಿಲೋ ಲೀಟರ್​ ದರ 64,323.76 ರೂಪಾಯಿ ತಲುಪಿದೆ.

ABOUT THE AUTHOR

...view details