ಕರ್ನಾಟಕ

karnataka

ETV Bharat / bharat

ನಿರ್ಭಯಾ ಪ್ರಕರಣದ ಆರೋಪಿಗಳಿಂದ ತಿಹಾರ್ ಜೈಲಿನ ವಿರುದ್ಧ ಅರ್ಜಿ ಸಲ್ಲಿಕೆ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಿಗಳು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ತಿಹಾರ್​ ಜೈಲಿನ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. ಪಟಿಯಾಲ ನ್ಯಾಯಾಲಯವು ನಾಳೆ ಅರ್ಜಿ ವಿಚಾರಣೆ ನಡೆಸಲಿದೆ.

Nirbhaya two convicts filed a petition accusing Tihar Jail
ನಿರ್ಭಯಾ ಪ್ರಕರಣದ ಆರೋಪಿಗಳಿಂದ ತಿಹಾರ್ ಜೈಲಿನ ವಿರುದ್ಧ ಅರ್ಜಿ ಸಲ್ಲಿಕೆ

By

Published : Jan 24, 2020, 6:02 PM IST

ನವದೆಹಲಿ : ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ತಿಹಾರ್​ ಜೈಲಿನ ವಿರುದ್ಧವೇ ಅರ್ಜಿ ಸಲ್ಲಿಸಿದ್ದಾರೆ. ಪಟಿಯಾಲ ನ್ಯಾಯಾಲಯವು ನಾಳೆ ಈ ಅರ್ಜಿ ವಿಚಾರಣೆ ನಡೆಸಲಿದೆ.

ಇಬ್ಬರು ಅಪರಾಧಿಗಳಾದ ಅಕ್ಷಯ್ ಮತ್ತು ಪವನ್ ತಮ್ಮ ವಕೀಲ ಎ.ಪಿ.ಸಿಂಗ್ ಮೂಲಕ ಸಲ್ಲಿಸಿದ್ದ ಅರ್ಜಿಯಲ್ಲಿ, ತಿಹಾರ್ ಜೈಲು ಆಡಳಿತವು ಇನ್ನೂ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ನೀಡಿಲ್ಲ ಎಂದು ದೂರಿದ್ದಾರೆ.

ಜನವರಿ 17 ರಂದು ಪಟಿಯಾಲ ಹೌಸ್ ಕೋರ್ಟ್ ಅಪರಾಧಿಗಳನ್ನು ಗಲ್ಲಿಗೇರಿಸಲು ಡೆತ್ ವಾರಂಟ್ ಹೊರಡಿಸಿದೆ. ಈ ಮೊದಲು ಫೆಬ್ರವರಿ 1 ರಂದು ಬೆಳಗ್ಗೆ 6 ಗಂಟೆಗೆ ಅಪರಾಧಿಗಳನ್ನು ಗಲ್ಲಿಗೇರಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಆದರೆ ಜನವರಿ 22 ರಂದು ಗಲ್ಲಿಗೇರಿಸಲು ಅಪರಾಧಿಗಳ ವಿರುದ್ಧ ಡೆತ್ ವಾರಂಟ್ ಹೊರಡಿಸಿದೆ.

ಈ ಕುರಿತು ಸಲ್ಲಿಸಿದ ಪರಿಹಾರಾತ್ಮಕ ಅರ್ಜಿಯನ್ನು ಜನವರಿ 20 ರಂದು ಕೋರ್ಟ್ ತಿರಸ್ಕರಿಸಿದೆ. ನ್ಯಾಯಮೂರ್ತಿ ಭಾನುಮತಿ ನೇತೃತ್ವದ ನ್ಯಾಯಪೀಠವು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆಯ ಸಮಯದಲ್ಲಿ ಒಬ್ಬ ಅಪರಾಧಿ 'ಅಪ್ರಾಪ್ತ ವಯಸ್ಕ' ಎಂಬ ಹೇಳಿಕೆಯನ್ನು ತಿರಸ್ಕರಿಸಿತ್ತು.

ABOUT THE AUTHOR

...view details