ಕರ್ನಾಟಕ

karnataka

ETV Bharat / bharat

ರಾಷ್ಟ್ರಪತಿ ತಿರಸ್ಕರಿಸಿದ ಅರ್ಜಿ ಪರಿಶೀಲನೆಗೆ ಪಟ್ಟು ಹಿಡಿದ ನಿರ್ಭಯಾ ಅಪರಾಧಿ​​

ನಿರ್ಭಯಾ ಅತ್ಯಾಚಾರ, ಕೊಲೆ ಪ್ರಕರಣದ ಅಪರಾಧಿ ಮುಖೇಶ್​​ ಕುಮಾರ್​ ರಾಷ್ಟ್ರಪತಿಗಳು ಕ್ಷಮಾದಾನದ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಇದೀಗ ಮತ್ತೆ ಸುಪ್ರೀಂ ಮೆಟ್ಟಿಲೇರಿದ್ದಾನೆ.

Mukesh Kumar
ಆರೋಪಿ ಮುಖೇಶ್​​

By

Published : Jan 25, 2020, 3:31 PM IST

Updated : Jan 25, 2020, 4:01 PM IST

ನವದೆಹಲಿ: ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯಾಗಿರುವ ಮುಖೇಶ್​​ ಕುಮಾರ್​ ಸಿಂಗ್​ ರಾಷ್ಟ್ರಪತಿಗೆ ಸಲ್ಲಿಸಿದ್ದ ಕ್ಷಮಾಪಣಾ ಅರ್ಜಿ ತಿರುಸ್ಕೃತವಾದ ಬಗ್ಗೆ ಪರಿಶೀಲಿಸುವಂತೆ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾನೆ.

ಅಪರಾಧಿ ಮುಖೇಶ್​​ ಸಿಂಗ್​ ಈ ಹಿಂದೆ ರಾಷ್ಟ್ರಪತಿಗಳಿಗೆ ಕ್ಷಮಾಪಣಾ ಅರ್ಜಿ ಸಲ್ಲಿಸಿದ್ದು, ಜನವರಿ 17ರಂದು ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಈ ಮನವಿಯನ್ನು ತಿರಸ್ಕಾರ ಮಾಡಿದ್ದರು.

ರಾಷ್ಟ್ರಪತಿಯಿಂದ ಅರ್ಜಿ ತಿರಸ್ಕಾರವಾದ ಹಿನ್ನೆಲೆ ದೆಹಲಿ ನ್ಯಾಯಾಲಯವು ನಿರ್ಭಯ ಅತ್ಯಾಚಾರಿಗಳಿಗೆ ಫೆಬ್ರವರಿ 1 ಬೆಳಗ್ಗೆ 6 ಗಂಟೆಗೆ ಮರಣದಂಡನೆ ಎಂದು ಘೋಷಿಸಿದ್ದು, ಇದೀಗ ಮತ್ತೆ ಮುಕೇಶ್​​ ಸಿಂಗ್​ ಈ ಅರ್ಜಿ ಪರಿಶೀಲನೆಗೆ ಸುಪ್ರೀಂ ಮೆಟ್ಟಿಲೇರಿದ್ದಾನೆ.

ಈ ನಡುವೆ ಸುಪ್ರೀಂಗೆ ಕೇಂದ್ರ ಸಹ ಅರ್ಜಿ ಸಲ್ಲಿಸಿದ್ದು, ಶೀಘ್ರ ಕ್ಷಮಾಪಣೆ ಅರ್ಜಿಗೆ 7 ದಿನಗಳ ಗಡುವು ನೀಡುವಂತೆ ಮನವಿ ಮಾಡಿದೆ. ಈ ಅರ್ಜಿಯೂ ಸಹ ಸುಪ್ರೀಂಕೋರ್ಟ್​ ಮುಂದಿದೆ. ಈಗ ಮತ್ತೆ ಮುಖೇಶ್​ ಸಲ್ಲಿಸಿರುವ ಅರ್ಜಿ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಯಾವ ನಿರ್ಧಾರ ಕೈಗೊಳ್ಳುತ್ತೆ ಕಾದು ನೋಡಬೇಕಿದೆ.

Last Updated : Jan 25, 2020, 4:01 PM IST

ABOUT THE AUTHOR

...view details