ಕರ್ನಾಟಕ

karnataka

ETV Bharat / bharat

ನೀರವ್ ಮೋದಿಯ ನೂರು ಕೋಟಿ ಬಂಗಲೆ ನೆಲಸಮ..! ಹೀಗೆ ಮಾಡಿದ್ದೇಕೆ?

ಪಂಜಾಬ್ ನ್ಯಾಷನಲ್ ಬ್ಯಾಂಕ್​ಗೆ ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರದ ವ್ಯಾಪಾರಿ, ಉದ್ಯಮಿ ನೀರವ್ ಮೋದಿಗೆ ಸೇರಿದ ಬಹುಕೋಟಿ ಮೌಲ್ಯದ ಐಶಾರಾಮಿ ಬಂಗಲೆಯನ್ನು ಸ್ಫೋಟಕಗಳನ್ನಿಟ್ಟು ಇಂದು ನೆಲಸಮಗೊಳಿಸಿದೆ.

ನೀರವ್ ಮೋದಿಗೆ ಸೇರಿದ ಬಹುಕೋಟಿ ಮೌಲ್ಯದ ಐಶಾರಾಮಿ ಬಂಗಲೆ ಧ್ವಂಸ.

By

Published : Mar 8, 2019, 6:39 PM IST

ರಾಯಗಢ(ಮಹಾರಾಷ್ಟ್ರ): ಬಹುಕೋಟಿ ವಂಚನೆ ಮಾಡಿ ದೇಶದಿಂದ ಪಲಾಯನ ಮಾಡಿರುವ ನೀರವ್ ಮೋದಿಗೆ ಸೇರಿದ ನೂರು ಕೋಟಿ ಮೌಲ್ಯದ ಬಂಗಲೆಯನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ.

ಕಿಹಿಮ್ ಬೀಚ್​​ ಸಮೀಪದಲ್ಲಿದ್ದ ನೀರವ್ ಮೋದಿ ಬಂಗಲೆಯನ್ನು 70,00 ಸ್ಕ್ವೇರ್​ಫೀಟ್​ನಲ್ಲಿ ನಿರ್ಮಾಣವಾಗಿತ್ತು. ಅತ್ಯಂತ ದೊಡ್ಡ ಲೋಹದ ಬೇಲಿ ಹಾಗೂ ಅತಿದೊಡ್ಡ ಗೇಟ್​ ಸಹ ಒಳಗೊಂಡಿತ್ತು.

ಈ ಬಂಗಲೆಯನ್ನು 2009-10ರಲ್ಲಿ ಕಟ್ಟಲಾಗಿತ್ತು. ಸದ್ಯ ವಂಚನೆ ಆರೋಪ ಎದುರಿಸುತ್ತಿರುವ ನೀರವ್ ಮೋದಿ ಆಸ್ತಿಗಳನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿತ್ತು.

ಬಂಗಲೆಯನ್ನು ನೆಲಸಮಗೊಳಿಸುವ ಕಾರ್ಯ ಜನವರಿ 25ರಂದು ಆರಂಭವಾಗಿತ್ತು. ಆದರೆ, ಎರಡೇ ದಿನದಲ್ಲಿ ಈ ಕಾರ್ಯ ಸ್ಥಗಿತವಾಗಿತ್ತು. ಬಂಗಲೆ ಒಳಭಾಗದಲ್ಲಿದಲ್ಲಿರುವ ಬೆಲೆಬಾಳುವ ವಸ್ತಗಳನ್ನು ಜಪ್ತಿ ಮಾಡುವ ನಿಟ್ಟಿನಲ್ಲಿ ನೆಲಸಮ ಕಾರ್ಯ ನಿಲ್ಲಿಸಲಾಗಿತ್ತು.

ABOUT THE AUTHOR

...view details