ನವದೆಹಲಿ:ಮೊದಲ ಬ್ಯಾಚ್ನ ಐದು ರಫೇಲ್ ಜೆಟ್ಗಳು ಫ್ರಾನ್ಸ್ನಿಂದ ಹೊರಟಿದ್ದು, ಜುಲೈ 29ರ ಬುಧವಾರ ಹರಿಯಾಣದ ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ.
2016ರ ಒಪ್ಪಂದದಂತೆ 59 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಸುಮಾರು 36 ಫೈಟರ್ ಜೆಟ್ಗಳಿಗೆ ಭಾರತ ಫ್ರಾನ್ಸ್ಗೆ ಬೇಡಿಕೆಯಿಟ್ಟಿತ್ತು. ಈಗ ಮೊದಲ ಬ್ಯಾಚ್ನ 5 ರಫೇಲ್ ಫೈಟರ್ ಜೆಟ್ಗಳನ್ನು ಫ್ರಾನ್ಸ್ ನೀಡುತ್ತಿದ್ದು, ಇದರ ಜೊತೆಗೆ ಭಾರತೀಯ ವಾಯುಪಡೆಯ 12 ಪೈಲಟ್ಗಳಿಗೆ ಸಂಪೂರ್ಣ ತರಬೇತಿ ನೀಡಲಾಗಿದೆ.
ಹರಿಯಾಣದ ಅಂಬಾಲಕ್ಕೆ ತೆರಳುವ ಮೊದಲು ಅರಬ್ ಎಮಿರೇಟ್ಸ್ನಲ್ಲಿರುವ ಫ್ರೆಂಚ್ ಏರ್ಬೇಸ್ಗೆ ತೆರಳಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ. ಈ ಕುರಿತು ಟ್ವೀಟ್ ಮಾಡಿರುವ ಫ್ರಾನ್ಸ್ನಲ್ಲಿರುವ ಭಾರತದ ರಾಯಭಾರ ಕಚೇರಿ 'ಶುಭ ಪ್ರಯಾಣ' ಎಂದು ಹಾರೈಸಿ ಭಾರತೀಯ ಪೈಲೆಟ್ಗಳೊಂದಿಗೆ ಮಾತುಕತೆ ನಡೆಸಿರುವ ದೃಶ್ಯಗಳನ್ನು ಹಂಚಿಕೊಂಡಿದೆ. ಇನ್ನೊಂದು ಟ್ವೀಟ್ನಲ್ಲಿ ರಫೇಲ್ ಅನ್ನು ಬ್ಯೂಟಿ & ದ ಬೀಸ್ಟ್ ಎಂದು ಬಣ್ಣಿಸಿದೆ.
ರಫೇಲ್ ಫೈಟರ್ ಜೆಟ್ಗಳು ಹ್ಯಾಮರ್ ಮಿಸೈಲ್ಗಳನ್ನು ಕೂಡಾ ಹೊತ್ತು ತರಲಿವೆ. ಈ ಯುದ್ಧ ವಿಮಾನಗಳು ಅಮೆರಿಕದ ಎಫ್-16 ಯುದ್ಧ ವಿಮಾನಗಳಿಗಿಂತ ಬಲಶಾಲಿಗಳಾಗಿವೆ. ಭಾರತ ಮತ್ತು ಚೀನಾ ನಡುವೆ ಗಡಿ ಸಂಘರ್ಷದ ಈ ಸಮಯದಲ್ಲೇ ರಫೇಲ್ ಯುದ್ಧ ವಿಮಾನಗಳು ವಾಯುಪಡೆಯ ಬತ್ತಳಿಕೆ ಸೇರುತ್ತಿರುವುದು ಭಾರತೀಯ ವಾಯುಪಡೆಯ ಆತ್ಮವಿಶ್ವಾಸ ಜೊತೆಗೆ ಬಲವನ್ನು ಹೆಚ್ಚಿಸಲಿದೆ.