ನವದೆಹಲಿ:ಪ್ರೀತಿಸಿದ ಯುವಕನೊಂದಿಗೆ ಮದುವೆಯಾದ ಯುವತಿಯು, ತನಗೆ ತನ್ನ ತವರು ಮನೆಯವರಿಂದಲೇ ಕೊಲೆ ಬೆದರಿಕೆಗಳು ಬರುತ್ತಿದ್ದು, ರಕ್ಷಣೆ ನೀಡಬೇಕೆಂದು ಪೊಲೀಸರಲ್ಲಿ ಮೊರೆ ಇಟ್ಟ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.
ಪ್ರೀತಿಸಿ ಮದುವೆಯಾದ ಯುವತಿಗೆ ಕೊಲೆ ಬೆದರಿಕೆ; ರಕ್ಷಣೆಗೆ ಮೊರೆ - ಅಪರಾಧ ಸುದ್ದಿ
ಯುವತಿಯು ಪಾಲಮ್ ನಿವಾಸಿಯಾಗಿದ್ದ ಯುವಕನೋರ್ವನೊಂದಿಗೆ ಮನೆಯಿಂದ ಓಡಿ ಹೋಗಿ ಮದುವೆಯಾಗಿದ್ದಳು. ಮದುವೆಯ ನಂತರ ಇಬ್ಬರೂ ವಿವಾಹವನ್ನು ನೋಂದಣಿ ಸಹ ಮಾಡಿಸಿಕೊಂಡಿದ್ದರು. ಆದರೆ ಇಂದು ಹೌಜ್ಖಾಸ್ನ ಎಸ್ಡಿಎಂ ಕಚೇರಿಗೆ ವಿವಾಹ ನೋಂದಣಿ ಪ್ರಮಾಣ ಪತ್ರ ಪಡೆಯಲು ಆಗಮಿಸಿದ್ದ ಯುವತಿ, ತನಗೆ ತನ್ನ ತವರು ಮನೆಯವರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದಳು.

ಈಟಿವಿ ಭಾರತ್ನೊಂದಿಗೆ ಮಾತನಾಡಿದ ಯುವತಿ, ತನಗೆ ಗಂಡನ ಮನೆಯವರಿಂದ ಅಥವಾ ಹೊರಗಿನವರಿಂದ ಯಾವುದೇ ಭಯವಿಲ್ಲ. ಆದರೆ ತವರು ಮನೆಯ ಕಡೆಯವರೇ ಪದೇ ಪದೇ ಕೊಲೆ ಬೆದರಿಕೆ ಹಾಕುತ್ತಿದ್ದಾರೆ. ತನ್ನ ಜೀವಕ್ಕೆ ಅಪಾಯವಿದ್ದು, ರಕ್ಷಣೆ ನೀಡಬೇಕೆಂದು ಮೊರೆಯಿಟ್ಟಳು.