ಕರ್ನಾಟಕ

karnataka

ETV Bharat / bharat

ಭಾರತ ನ್ಯೂಕ್ಲಿಯರ್​ ರಾಷ್ಟ್ರ ಎಂದು ಒಪ್ಪಲ್ಲ: ಚೀನಾ ಮತ್ತೆ ತೊಡರುಗಾಲು

ಭಾರತ ಹಾಗೂ ಪಾಕಿಸ್ತಾನವನ್ನು ನ್ಯೂಕ್ಲಿಯರ್​ ದೇಶಗಳು ಎಂದು ಪರಿಗಣಿಸಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್​ ಹೇಳಿದ್ದಾರೆ

ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್​

By

Published : Mar 2, 2019, 1:37 PM IST

ಬೀಜಿಂಗ್​: ಪಾಕ್​ ಬೆನ್ನಿಗೆ ನಿಂತು, ಭಾರತದ ರಾಜತಾಂತ್ರಿಕ ಕೂಗಿಗೆ ಮನ್ನಣೆ ನೀಡದ ಚೀನಾ ಇದೀಗ, ಎರಡೂ ರಾಷ್ಟ್ರಗಳನ್ನು ನ್ಯೂಕ್ಲಿಯರ್​ ರಾಷ್ಟ್ರಗಳೆಂದು ತಾನು ಪರಿಗಣಿಸಿಯೇ ಇಲ್ಲ ಎಂದು ಹೇಳಿದೆ.

ದಕ್ಷಿಣ ಕೊರಿಯಾವನ್ನು ನ್ಯೂಕ್ಲಿಯರ್​ ದೇಶವೆಂದು ಚೀನಾ ಪರಿಗಣಿಸಿ, ಕಿಮ್ ಹಾಗೂ ಟ್ರಂಪ್​ರ ನ್ಯೂಕ್ಲಿಯರ್​ ಒಪ್ಪಂದ ಮುರಿದು ಬಿದ್ದಿದ್ದರ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಇಂತಹ ಹೇಳಿಕೆ ನೀಡಿದೆ.

ಚೀನಾ ಎಂದಿಗೂ ಭಾರತ ಹಾಗೂ ಪಾಕಿಸ್ತಾನವನ್ನು ನ್ಯೂಕ್ಲಿಯರ್​ ದೇಶಗಳು ಎಂದು ಪರಿಗಣಿಸಿಯೇ ಇಲ್ಲ. ಅಲ್ಲದೆ, ನಮ್ಮ ಈ ನಿಲುವು ಎಂದಿಗೂ ಬದಲಾಗುವುದಿಲ್ಲ ಎಂದು ಚೀನಾದ ವಿದೇಶಾಂಗ ಇಲಾಖೆಯ ವಕ್ತಾರ ಲು ಕಾಂಗ್​ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಚೀನಾ ಈಗಾಗಲೆ, ನ್ಯೂಕ್ಲಿಯರ್​ ಪೂರೈಕೆದಾರರ ಗುಂಪಿ(NSG)ನಿಂದ ಭಾರತವನ್ನು ಬ್ಲಾಕ್ ಮಾಡಿದೆ. ಕಾರಣ ಭಾರತವು ನ್ಯೂಕ್ಲಿಯರ್​ ಪ್ರಸರಣ ಮಾಡದ ಒಪ್ಪಂದ (NPT)ಕ್ಕೆ ಸಹಿ ಹಾಕಿಲ್ಲ. ಭಾರತ ಎನ್​ಎಸ್​ಜಿ ಗುಂಪಿನಲ್ಲಿ ಸದಸ್ಯತ್ವ ಪಡೆಯಲು ಅರ್ಜಿ ಸಲ್ಲಿಸಿದ ಬೆನ್ನಲ್ಲೆ, ಪಾಕ್​ ಸಹ ಸಲ್ಲಿಸಿತ್ತು. ಇದಕ್ಕೆ ಆಕ್ಷೇಪ ಮಾಡಿದ್ದ ಚೀನಾ ಮೊದಲು ಎರಡೂ ರಾಷ್ಟ್ರಗಳು ಎನ್​ಪಿಟಿಯಿಂದ ಎನ್​ಎಸ್​ಜಿ ರಾಷ್ಟ್ರಗಳಾಗಬೇಕು. ಆನಂತರ ಮುಂದಿನ ಮಾತಕತೆ ಎಂದಷ್ಟೇ ಹೇಳಿತ್ತು.

ABOUT THE AUTHOR

...view details