ಬೆಳ್ತಂಗಡಿ(ದಕ್ಷಿಣ ಕನ್ನಡ):ತಾಲೂಕಿನ ನೆರಿಯ ಗ್ರಾಮದ ಇಟ್ಟಾಡಿ ಎಂಬಲ್ಲಿ ಶೆಡ್ ನಿರ್ಮಿಸಿ ಕದ್ದ ಗೋವುಗಳನ್ನು ತಂದು ಮಾಂಸ ಮಾಡಿ ಸಾಗಣೆ ಮಾಡುತ್ತಿದ್ದಲ್ಲಿಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಕ್ರಮ ಗೋ ಮಾಂಸ ಸಹಿತ ಓರ್ವನ ಬಂಧನ, ಇಬ್ಬರು ಪರಾರಿ - Dharmasthala Police Station
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಇಟ್ಟಾಡಿ ಎಂಬಲ್ಲಿ ಶೆಡ್ ನಿರ್ಮಿಸಿ ಕದ್ದ ಗೋವುಗಳನ್ನು ತಂದು ಮಾಂಸ ಮಾಡಿ ಸಾಗಣೆ ಮಾಡುತ್ತಿದ್ದಲ್ಲಿಗೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ನೆರಿಯ: ಅಕ್ರಮ ಗೋ ಮಾಂಸ ಸಹಿತ ಓರ್ವನ ಬಂಧನ, ಇಬ್ಬರು ಪರಾರಿ
ಖಚಿತ ಮಾಹಿತಿ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಓಡಿಯಪ್ಪ ಗೌಡ ಹಾಗೂ ಸಿಬ್ಬಂದಿ ದಾಳಿ ನಡೆಸಿ ನಿಸಾರ್ ಎಂಬಾತನನ್ನು ಬಂಧಿಸಿದ್ದಾರೆ. ಇನ್ನೂ ಈ ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನಿಬ್ಬರು ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ.
ದಾಳಿ ನಡೆಸಿದ ಸ್ಥಳದಿಂದ ಸುಮಾರು 15,000/- ರೂಪಾಯಿ ಮೌಲ್ಯದ ಗೋ ಮಾಂಸ ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 5, 7, 9, 11 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯ್ದೆ ಮತ್ತು ಜಾನುವಾರು ಸಂರಕ್ಷಣಾ ಕಾಯ್ದೆ 1964, ಕಲಂ: 379 ಜೊತೆಗೆ 34 ಐ.ಪಿ.ಸಿ ಯಂತೆ ಪ್ರಕರಣ ದಾಖಲಾಗಿದೆ.