ಪಿಲಿಭಿತ್(ಉತ್ತರಪ್ರದೇಶ): ಪಿಲಿಭಿತ್ ಜಿಲ್ಲೆಯ ಪಕ್ಕದಲ್ಲಿರುವ ಇಂಡೋ-ನೇಪಾಳ ಗಡಿಯಲ್ಲಿರುವ ನೋ ಮ್ಯಾನ್ಸ್ ಲ್ಯಾಂಡ್ ಪ್ರದೇಶದಲ್ಲಿ ನೇಪಾಳವು ಕಾನೂನುಬಾಹಿರವಾಗಿ ರಸ್ತೆ ನಿರ್ಮಾಣವನ್ನು ಪ್ರಾರಂಭಿಸಿತ್ತು. ಇದಕ್ಕೆ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
ಪಿಲಿಭಿತ್ ಜಿಲ್ಲಾಧಿಕಾರಿ ವೈಭವ್ ಶ್ರೀವಾಸ್ತವ್ ಸೇರಿದಂತೆ ಜಿಲ್ಲೆಯ ಉನ್ನತ ಅಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಭಾರತ ನೇಪಾಳ ಗಡಿಯನ್ನು ತಲುಪಿ ನೇಪಾಳ ನಿರ್ಮಿಸುತ್ತಿರುವ ರಸ್ತೆಯ ನಿರ್ಮಾಣವನ್ನು ನಿಲ್ಲಿಸಿದ್ದಾರೆ.