ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಗ್ಲೈಡರ್ ಪತನಗೊಂಡಿದ್ದು, ವಿಮಾನದಲ್ಲಿದ್ದ ಇಬ್ಬರು ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ಕೊಚ್ಚಿಯಲ್ಲಿ ಗ್ಲೈಡರ್ ಪತನ: ಇಬ್ಬರು ಅಧಿಕಾರಿಗಳ ದುರ್ಮರಣ - Kochi plane crash
ಐಎನ್‌ಎಸ್ ಗರುಡಾ ನೌಕಾನೆಲೆಯಿಂದ ಹೊರಟಿದ್ದ ಗ್ಲೈಡರ್ ಕೇರಳದ ಕೊಚ್ಚಿಯಲ್ಲಿ ಪತನಗೊಂಡಿದ್ದು, ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ.

ಕೊಚ್ಚಿಯಲ್ಲಿ ಯುದ್ಧ ವಿಮಾನ ಪತನ
ಲೆಫ್ಟಿನೆಂಟ್ ರಾಜೀವ್ ಮತ್ತು ಇನ್ನೊಬ್ಬ ಅಧಿಕಾರಿ ಸುನಿಲ್ ಕುಮಾರ್ ಮೃತರು. ಇಂದು ಬೆಳಗ್ಗೆ ಐಎನ್‌ಎಸ್ ಗರುಡಾ ನೌಕಾನೆಲೆಯಿಂದ ಹೊರಟಿದ್ದ ಗ್ಲೈಡರ್ ತೊಪ್ಪಂಪಡಿ ಸೇತುವೆ ಬಳಿಯ ವಾಕ್ ವೇ ಸಮೀಪ ಪತನಗೊಂಡಿದೆ.
ಗ್ಲೈಡರ್ ಪತನಗೊಂಡು ಇಬ್ಬರು ಅಧಿಕಾರಿಗಳ ದುರ್ಮರಣ
ಸದರ್ನ್ ನೇವಲ್ ಕಮಾಂಡ್ನ (ಎಸ್‌ಎನ್‌ಸಿ) ಗ್ಲೈಡರ್ ಇದಾಗಿದ್ದು, ಘಟನೆಯಲ್ಲಿ ರಾಜೀವ್ ಮತ್ತು ಸುನಿಲ್ ಕುಮಾರ್ ಗಂಭೀರವಾಗಿ ಗಾಯಗೊಂಡಿದ್ದರು. ಇವರನ್ನು ಕೊಚ್ಚಿಯ ಐಎನ್ಹೆಚ್ಎಸ್ ಸಂಜೀವಿನಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ದುರಾದೃಷ್ಟವಶಾತ್ ಅವರು ಬದುಕುಳಿಯಲಿಲ್ಲ.
Last Updated : Oct 4, 2020, 12:23 PM IST