ಕರ್ನಾಟಕ

karnataka

ETV Bharat / bharat

'ರಾಷ್ಟ್ರೀಯ ಪೌಷ್ಟಿಕಾಂಶ ವಾರ'.. ದೇಶದ ಪೌಷ್ಟಿಕಾಂಶ ಹೆಚ್ಚಿಸಲು ಶಪಥ ಮಾಡೋಣ - severe acute malnutrition

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ರಾಷ್ಟ್ರೀಯ ಪೋಷಣೆ ಮಾಸ 2020ರ ಟಿಪ್ಪಣಿಯ ಪ್ರಕಾರ, ಆರು ವರ್ಷ ವಯಸ್ಸಿನ ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಪೌಷ್ಠಿಕಾಂಶವನ್ನು ಸುಧಾರಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ..

NUTRITION
ಪೌಷ್ಟಿಕಾಂಶ

By

Published : Sep 2, 2020, 5:53 PM IST

ಆರೋಗ್ಯಕರ ಸದೃಢ ದೇಹ ಮತ್ತು ಮನಸ್ಸಿಗೆ ಪೌಷ್ಠಿಕಾಂಶಯುತ ಆಹಾರ ಅತ್ಯಗತ್ಯ. ಇದರ ಆಳವಾದ ಮಹತ್ವವನ್ನು ಒತ್ತಿ ಹೇಳುವ ಜನಪ್ರಿಯ ನುಡಿಗಟ್ಟುಗಳು ನಮ್ಮಲ್ಲಿ ಪ್ರಚಲಿತದಲ್ಲಿವೆ. 'ನೀವು ಏನು ತಿನ್ನುತ್ತಿದ್ದೀರಿ', 'ನೀವು ಕಡಿಮೆ ತಿನ್ನಬಾರದು ಮತ್ತು ನೀವು ಸರಿಯಾದ ಪ್ರಮಾಣದಲ್ಲಿ ತಿನ್ನಬೇಕು' ಎನ್ನುವ ಮಾತನ್ನು ಎಲ್ಲರೂ ಪಾಲಿಸಬೇಕಿದೆ.

ಹಲವಾರು ದೀರ್ಘಕಾಲಿಕ ಕಾಯಿಲೆಗಳ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ಚಿಕಿತ್ಸೆಯಲ್ಲಿ ಕ್ರಿಯಾತ್ಮಕ ಆಹಾರದ ಜೊತೆಗೆ ಆಹಾರದಲ್ಲಿರುವ ಪೌಷ್ಟಿಕಾಂಶವು ನಮ್ಮ ದೈನಂದಿನ ಚಯಾಪಚಯ ಚಟುವಟಿಕೆಗಳಿಗೆ ಏಕಕಾಲದಲ್ಲಿ ಅತ್ಯುತ್ತಮ ಪೋಷಣೆ ಒದಗಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ನಮ್ಮ ಆಹಾರದ ಆಯ್ಕೆಗಳು ಮತ್ತು ಜೀವನಶೈಲಿಯ ಬದಲಾವಣೆಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೆಪ್ಟೆಂಬರ್ 1ರಿಂದ 7ರವರೆಗೆ 'ರಾಷ್ಟ್ರೀಯ ಪೌಷ್ಟಿಕಾಂಶ ವಾರ'(National Nutrition Week)ವನ್ನು ಆಚರಿಸಲಾಗುತ್ತದೆ.

ವಿಶೇಷವಾಗಿ ಈ ವರ್ಷ ಸೆಪ್ಟೆಂಬರ್ 1ರಿಂದ ಸೆಪ್ಟೆಂಬರ್ 30ರವರೆಗೂ ಅಂದರೆ ಪೂರ್ತಿ ಒಂದು ತಿಂಗಳು ಈ ರಾಷ್ಟ್ರೀಯ ಪೌಷ್ಟಿಕಾಂಶ ವಾರವನ್ನು 'ರಾಷ್ಟ್ರೀಯ ಪೋಷಣಾ​ ಮಾಸ-2020' ಎಂದು ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೀಗಾಗಿ ಈ ತಿಂಗಳಲ್ಲಿ ಪೋಷಣಾ ಮಾಸವನ್ನು ಅರ್ಥಪೂರ್ಣವಾಗಿ ಆಚರಿಸಲು, ಎರಡು ಪ್ರಮುಖ ಚಟುವಟಿಕೆಗಳನ್ನು ಯೋಜಿಸಲಾಗಿದೆ.

  • ತೀವ್ರ ಅಪೌಷ್ಟಿಕತೆ(severe acute malnutrition)ಯಿಂದ ಬಳಲುತ್ತಿರುವ ಮಕ್ಕಳನ್ನ ಗುರುತಿಸುವಿಕೆ ಮತ್ತು ಟ್ರ್ಯಾಕಿಂಗ್
  • ಪೋಶನ್ ಕೆ ಲಿಯೆ ಪೌಧೆ(ಪೋಷಣೆಗಾಗಿ ಗಿಡ) ಅಡಿಯಲ್ಲಿ ಕಿಚನ್ ಗಾರ್ಡನ್ ಪ್ರಚಾರಕ್ಕಾಗಿ ಉತ್ತೇಜನ ನೀಡುವುದು

ಸಮಗ್ರ ಪೋಷಣೆಯ ಉದ್ದೇಶದಿಂದ 2022ರ ವೇಳೆಗೆ ಅಪೌಷ್ಟಿಕತೆಯನ್ನು ನಿವಾರಿಸುವ ಸಲುವಾಗಿ, ಪ್ರಧಾನಮಂತ್ರಿಗಳು ಪೋಷಣೆ ಅಭಿಯಾನವನ್ನು ಆರಂಭಿಸಿದ್ದಾರೆ. 2022ರ ವೇಳೆಗೆ ದೇಶದ ಅಪೌಷ್ಟಿಕತೆಯನ್ನು ಕಡಿಮೆ ಮಾಡುವ ಉದ್ದೇಶ ಇದರದ್ದಾಗಿದೆ. ಈ ಪೋಷಣೆ ಅಭಿಯಾನಕ್ಕೆ ಕಳೆದ 2018ರ ಮಾರ್ಚ್​ ತಿಂಗಳಲ್ಲಿ ರಾಜಸ್ಥಾನದ ಜುಂಜುನುನಲ್ಲಿ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ರಾಷ್ಟ್ರೀಯ ಪೋಷಣೆ ಮಾಸ 2020ರ ಟಿಪ್ಪಣಿಯ ಪ್ರಕಾರ, ಆರು ವರ್ಷ ವಯಸ್ಸಿನ ಮಕ್ಕಳು, ಹದಿಹರೆಯದ ಯುವತಿಯರು, ಗರ್ಭಿಣಿ ಹಾಗೂ ಹಾಲುಣಿಸುವ ತಾಯಂದಿರ ಪೌಷ್ಠಿಕಾಂಶವನ್ನು ಸುಧಾರಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ದೇಶದ ಪ್ರತಿ ಮೂಲೆ-ಮೂಲೆಯಲ್ಲೂ ಪೌಷ್ಟಿಕಾಂಶದ ಸಂದೇಶವನ್ನು ಕೊಂಡೊಯ್ದು, ಮಕ್ಕಳು ಸೋಂಕುಗಳಿಂದ ಮುಕ್ತವಾಗುವಂತೆ ಪೂರಕ ಆಹಾರ, ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯ ಬಗ್ಗೆ ಗಮನಹರಿಸುವುದು ಪೋಷಣೆ ಮಾಸವನ್ನು ಆಚರಿಸುವ ಮುಖ್ಯ ಉದ್ದೇಶವಾಗಿದೆ. ಅಲ್ಲದೆ ಕನಿಷ್ಠ ಆರು ತಿಂಗಳವರೆಗೆ ಶಿಶುಗಳಿಗೆ ಸ್ತನ್ಯಪಾನದ ಅಭ್ಯಾಸವನ್ನು ಉತ್ತೇಜಿಸುವುದನ್ನು ಈ ಯೋಜನೆ ಕೇಂದ್ರೀಕರಿಸುತ್ತದೆ.

ಇದಲ್ಲದೆ, ಪೋಷಣೆ​ ಮಾಸದಲ್ಲಿ ಕಿಚನ್ ಗಾರ್ಡನ್ ಅಥವಾ ಅಡುಗೆ ಮನೆಯಲ್ಲಿ ವಿವಿಧ ಪೌಷ್ಟಿಕಾಂಶಗಳುಳ್ಳ ಗಿಡಗಳನ್ನು ನೆಟ್ಟು, ಪುಟ್ಟ ತೋಟಗಳನ್ನು ನಿರ್ಮಿಸುವತ್ತ ಗಮನಹರಿಸಲು ಈ ಯೋಜನೆ ರೂಪಿಸಲಾಗಿದೆ. ಅದರಂತೆ ಜನರು ಪೌಷ್ಟಿಕ ತರಕಾರಿ ಮತ್ತು ಹಣ್ಣುಗಳನ್ನು ನೀಡುವ ಸಸ್ಯಗಳು ಮತ್ತು ಮರಗಳನ್ನು ನೆಡಲು ಪ್ರೋತ್ಸಾಹಿಸುವುದು ಮತ್ತು ಜಮೀನಿನ ಅನುಪಸ್ಥಿತಿಯಲ್ಲಿ ಮನೆಯ ಖಾಲಿ ಜಾಗ ಹಾಗೂ ತಾರಸಿಯಲ್ಲಿ ಕೈತೋಟಗಳನ್ನು ನಿರ್ಮಿಸಲು ಪ್ರೋತ್ಸಾಹಿಸುವಂತೆ ಜನರಲ್ಲಿ ಕೋರಲಾಗಿದೆ.

ಒಂದು ದೇಶವಾಗಿ ನಾವು ಮಕ್ಕಳಲ್ಲಿ ಪೌಷ್ಟಿಕಾಂಶದ ವಿರುದ್ಧ ಹೋರಾಡಲು ಈ ಪ್ರತಿಜ್ಞೆಯನ್ನು ತೆಗೆದುಕೊಳ್ಳೋಣ. ನಮ್ಮ ಸ್ನೇಹಿತರು, ಆಪ್ತರು, ಬಂಧು ಹಾಗೂ ಮಿತ್ರರಿಗೆ ಅದರ ಪ್ರಾಮುಖ್ಯತೆಯ ಬಗ್ಗೆ ತಿಳಿಸುವ ಮೂಲಕ ಪ್ಲಾಂಟೇಶನ್ ಡ್ರೈವ್‌ನ ಮುಂದಕ್ಕೆ ಕೊಂಡೊಯ್ಯಬೇಕಿದೆ. ರಾಷ್ಟ್ರೀಯ ಪೌಷ್ಟಿಕಾಂಶ ವಾರದ ಪೋಷಣೆ ಮಾಸವನ್ನು ಭಾರತದಾದ್ಯಂತ ಅನೇಕ ರೀತಿಯಲ್ಲಿ ಆಚರಿಸಲಾಗುವುದು. ಇದಕ್ಕಾಗಿ ಆನ್​ಲೈನ್​ ಸಭೆಗಳು, ವೆಬಿನಾರ್‌ಗಳು, ವಿವಿಧ ಸ್ಪರ್ಧೆಗಳು,ಪ್ಲಾಂಟೇಶನ್ ಡ್ರೈವ್​ನ ಛಾಯಾಚಿತ್ರ ಇತ್ಯಾದಿಗಳನ್ನು ಆಚರಿಸಲಾಗುತ್ತದೆ. ವೈಕ್ತಿಕ ಪೌಷ್ಟಿಕಾಂಶವನ್ನು ಹೆಚ್ಚಿನ ದೇಶದ ಪೌಷ್ಟಿಕಾಂಶವನ್ನು ಹೆಚ್ಚಿಸುವಲ್ಲಿ ಎಲ್ಲರೂ ಕೈಜೋಡಿಸಬೇಕಿದೆ. ಭಾರತವನ್ನು ಆರೋಗ್ಯಕರ ದೇಶವನ್ನಾಗಿ ಮಾಡೋಣ.

-ಡಾ.ದೀಪ್ತಿ ವರ್ಮಾ, ಕಾರ್ಯಕ್ರಮದ ಮುಖ್ಯಸ್ಥೆ. ವಿಎಲ್‌ಸಿಸಿ ಹೆಲ್ತ್‌ಕೇರ್ ಲಿಮಿಟೆಡ್

ABOUT THE AUTHOR

...view details