ನವದೆಹಲಿ: ಫೆಬ್ರವರಿ 24ರಂದು ಗುಜರಾತ್ನ ಅಹಮದಾಬಾದ್ ನಗರದಲ್ಲಿ ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮಕ್ಕೆ ಇಂದು ಇಡೀ ದೇಶ ಬೆಲೆ ತೆರುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಅಹಮದಾಬಾದ್‌ನಲ್ಲಿ ಫೆಬ್ರವರಿ 24ರಂದು ನಡೆದ ನಮಸ್ತೆ ಟ್ರಂಪ್ ಕಾರ್ಯಕ್ರಮದಿಂದಾಗಿ ಗುಜರಾತ್ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗುಜರಾತ್ ಕಾಂಗ್ರೆಸ್ ಮುಖ್ಯಸ್ಥ ಅಮಿತ್ ಚಾವ್ಡಾ ನಿನ್ನೆ ಆರೋಪಿಸಿದ್ದರು. ಈಗ ಇದಕ್ಕೆ ಕಾಂಗ್ರೆಸ್ ಧ್ವನಿಗೂಡಿಸಿದ್ದು, ನಮಸ್ತೆ ಟ್ರಂಪ್ ಪ್ರಚಾರ ಕಾರ್ಯಕ್ರಮದಿಂದಾಗಿ ಅಹಮದಾಬಾದ್ ರಾಜ್ಯದ ಕೊರೊನಾ ಹಾಟ್ಸ್ಪಾಟ್ ಆಗಿದೆ. ರಾಜ್ಯದ ಶೇ.73 ರಷ್ಟು ಸಾವು ಅಹಮದಾಬಾದ್‌ನಲ್ಲಿ ಸಂಭವಿಸಿದೆ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.