ಕರ್ನಾಟಕ

karnataka

ETV Bharat / bharat

ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ: ಬೆಚ್ಚಿಬಿದ್ದ ಜನರು - ನಂದಗಾಂವ್ ಕೊಲೆ ಪ್ರಕರಣ

ತಂದೆ - ತಾಯಿ ಸೇರಿದಂತೆ ಒಂದೇ ಕುಟುಂಬದ ನಾಲ್ವರನ್ನು ಭೀಕರವಾಗಿ ಕೊಲೆಗೈದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಈ ಸಾಮೂಹಿಕ ಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ.

nashik-4-people-murder-of-same-family
ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ

By

Published : Aug 7, 2020, 9:13 AM IST

ನಂದಗಾಂವ್(ಮಹಾರಾಷ್ಟ್ರ): ಇಲ್ಲಿನ ನಂದಗಾಂವ್ ತಾಲೂಕಿನ ವಖರಿಯಲ್ಲಿ ಒಂದೇ ಕುಟುಂಬದ 4 ಸದಸ್ಯರನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ತಂದೆ-ತಾಯಿ ಮತ್ತು ಇಬ್ಬರು ಮಕ್ಕಳು ಕೊಲೆಯಾಗಿದ್ದಾರೆ.

ಕೊಲೆಯಾದವರನ್ನು 37 ವರ್ಷದ ಸಮಾಧನ್​, ಭರ್ತಬಾಯಿ ಚವ್ಹಾಣ್​ (32), ಗಣೇಶ್ ಚವ್ಹಾಣ್​ (6), ಅರಿಹಿ ಚವ್ಹಾಣ್​ (4) ಎಂದು ಗುರುತಿಸಲಾಗಿದೆ. ಭಯಾನಕವಾಗಿ ನಡೆದ ಕೊಲೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಕರಣವನ್ನ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈ ಸಾಮೂಹಿಕ ಹತ್ಯೆಗೆ ಕಾರಣ ಏನು ಎಂಬುದು ಇನ್ನೂ ತಿಳಿದು ಬಂದಿಲ್ಲ. ತನಿಖೆ ಬಳಿಕ ಸ್ಪಷ್ಟ ಮಾಹಿತಿ ಗೊತ್ತಾಗಲಿದೆ.

ABOUT THE AUTHOR

...view details