ಕರ್ನಾಟಕ

karnataka

ETV Bharat / bharat

ರಾಮಮಂದಿರ ನಿರ್ಮಾಣಕ್ಕೆ ಬೆಂಬಲ, ನಮೋಗಾಗಿ ಮುಸ್ಲಿಂ ಮಹಿಳೆಯರಿಂದ ವಿಶೇಷ ರಾಖಿ ತಯಾರು!

ರಕ್ಷಾ ಬಂಧನ ಆಚರಣೆ ಮಾಡಲು ದಿನಗಣನೇ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಉತ್ತರಪ್ರದೇಶದ ವಾರಣಾಸಿಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ವಿಶೇಷವಾಗಿ ರಾಖಿ ತಯಾರು ಮಾಡುತ್ತಿದ್ದಾರೆ.

By

Published : Jul 24, 2020, 10:49 PM IST

Muslim women make rakhis
Muslim women make rakhis

ವಾರಣಾಸಿ: ರಕ್ಷಾ ಬಂಧನ ಆಚರಣೆಗೋಸ್ಕರ ದಿನಗಣನೇ ಆರಂಭಗೊಂಡಿದ್ದು, ಉತ್ತರಪ್ರದೇಶದ ವಾರಣಾಸಿಯಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರು ಪ್ರಧಾನಿ ಮೋದಿಗೋಸ್ಕರ ವಿಶೇಷವಾದ ರಾಖಿ ತಯಾರು ಮಾಡುತ್ತಿದ್ದಾರೆ.

ರಾಖಿಗಳ ಮೇಲೆ ಶ್ರೀರಾಮ, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​, ಅಯೋಧ್ಯೆ ಸೇರಿದಂತೆ ಅನೇಕ ಪ್ರಮುಖ ಮುಖ ಚಹರೆವುಳ್ಳ ರಾಖಿ ತಯಾರಿಸುತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ತಾವು ಸಪೋರ್ಟ್​ ಮಾಡುವುದಾಗಿ ಈ ರಾಖಿಗಳಲ್ಲಿ ಸಂದೇಶ ನೀಡುತ್ತಿರುವ ಮಹಿಳೆಯರು, ಈ ಹಿಂದಿನಿಂದಲೂ ಈ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಮಯದಿಂದಲೂ ಅವರಿಗೆ ರಾಖಿ ಕಳುಹಿಸುತ್ತಿದ್ದು, ತ್ರಿಬಲ್​ ತಲಾಖ್​ ಪದ್ಧತಿ ರದ್ಧುಗೊಳಿಸುವಂತೆ ಈ ಹಿಂದೆ ಮನವಿ ಮಾಡಿಕೊಂಡಿದ್ದರಂತೆ. ಅದರಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಅವಧಿಯಲ್ಲಿ ತ್ರಿವಳಿ ತಲಾಖ್​ ಮಸೂದೆ ಕಾನೂನು ಆಗಿ ಜಾರಿಗೊಂಡಿದೆ. ಮುಸ್ಲಿಂ ಸಮುದಾಯದ ರಕ್ಷಣೆ ಮಾಡುವಲ್ಲಿ ಪ್ರಧಾನಿ ನರೇಂದ್ರ ಮೋದಿ ನಮಗೆ ಸಹಾಯ ಮಾಡಿದ್ದು, ನಿಜವಾಗಲೂ ಅವರು ನಮಗೆ ತಂದೆ, ಸಹೋದರ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ABOUT THE AUTHOR

...view details