ವಾರಣಾಸಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ಲಖನೌದ ಸಿಬಿಐ ಕೋರ್ಟ್ ನೀಡಿದ್ದ ತೀರ್ಪಅನ್ನು ಮುಸ್ಲಿಂ ಮಹಿಳಾ ಫೌಂಡೇಷನ್ ಅಧ್ಯಕ್ಷೆ ನಂಜೀನ್ ಅನ್ಸಾರಿ ನೇತೃತ್ವದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರ ಗುಂಪೊಂದು ಸ್ವಾಗತಿಸಿ, ಸಂಭ್ರಮಿಸಿದೆ.
ನಗರದಲ್ಲಿ ಮುಸ್ಲಿಂ ಮಹಿಳಾ ಫೌಂಡೇಷನ್ ಹಾಗೂ ವಿಶಾಲ್ ಭಾರತ್ ಸಂತ್ಸಾನ್ ಜಂಟಿಯಾಗಿ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದ್ದರು.
ಬಾಬ್ರಿ ಮಸೀದಿ ತೀರ್ಪು: ಮುಸ್ಲಿಂ ಮಹಿಳೆಯರಿಂದ ಸಂಭ್ರಮಾಚರಣೆ ಉರ್ದು ಭಾಷೆಯಲ್ಲಿ ಶ್ರೀ ರಾಮ ಆರತಿ ಮತ್ತು ಹನುಮಾನ್ ಚಾಲಿಸ್ ಅನುವಾದ ಮಾಡಿರುವ ಅನ್ಸಾರಿ ಅವರು ಸಿಹಿ ಹಂಚಿ ಸಂಭ್ರಮಿಸಿದರು. ಸತ್ಯ ಯಾವಾಗಲೂ ಗೆಲ್ಲುತ್ತೆ. ಕೋರ್ಟ್ ತೀರ್ಪು ದೇಶದ ಜನರಲ್ಲಿ ಶಾಂತಿ ಮತ್ತು ಪ್ರೀತಿಯ ಸಂದೇಶ ರವಾನಿಸಿದೆ ಎಂದು ಅನ್ಸಾರಿ ಹೇಳಿದರು.
1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ 32 ಆರೋಪಿಗಳನ್ನು ಖುಲಾಸೆಗೊಳಿಸಿ ಲಖನೌ ಸಿಬಿಐ ಕೋರ್ಟ್ ತೀರ್ಪು ನೀಡಿದೆ.