ಹೈದರಾಬಾದ್:ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಗಳನ್ನು ಹಂಚಿಕೊಳ್ಳಲು 'ಹೈದರಾಬಾದ್‌ನ ಪಕ್ಷ'ವೊಂದಕ್ಕೆ ಬಿಜೆಪಿ ಹಣ ನೀಡುತ್ತಿದೆ ಎಂದು ಮಮತಾ ಬ್ಯಾನರ್ಜಿ ಆರೋಪಕ್ಕೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ, ಮುಸ್ಲಿಂ ಮತದಾರರು ಮಮತಾ ಬ್ಯಾನರ್ಜಿ ಅವರ ಆಸ್ತಿಯಲ್ಲ. ನನ್ನನ್ನು ಖರೀದಿ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ನನ್ನನ್ನು ಮತ್ತು ನನ್ನ ಪಕ್ಷವನ್ನು ಹಣದಿಂದ ಖರೀದಿ ಮಾಡಲು ಇಡೀ ಜಗತ್ತಿನಲ್ಲಿ ಯಾರಿಂದಲೂ ಸಾಧ್ಯವಿಲ್ಲ. ಅಂತಹ ವ್ಯಕ್ತಿ ಈ ವರೆಗೂ ಹುಟ್ಟಿಯೂ ಇಲ್ಲ, ಮುಂದೊಂದು ದಿನ ಹುಟ್ಟುವುದೂ ಇಲ್ಲ. ಮುಸ್ಲಿಂ ಮತದಾರರು ಮಮತಾ ಅವರ ಆಸ್ತಿಯಲ್ಲ. ಮಮತಾ ಬ್ಯಾನರ್ಜಿ ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅವರ ಮಾತುಗಳು ಆಧಾರರಹಿತವಾಗಿವೆ ಎಂದು ಅಸಮಾಧಾನ ಹೊರಹಾಕಿದರು.