ಕರ್ನಾಟಕ

karnataka

ETV Bharat / bharat

ಛತ್ತೀಸ್​ಗಢ: ಮಾಜಿ ಸಚಿವರ ನಿವಾಸದಲ್ಲೇ ಸೊಸೆ ಮತ್ತು ಮೊಮ್ಮಗಳ ಕೊಲೆ

ಛತ್ತೀಸ್​ಗಢದ ಮಾಜಿ ಸಚಿವರೊಬ್ಬರ ಸೊಸೆ ಹಾಗೂ 9 ವರ್ಷದ ಮೊಮ್ಮಗಳನ್ನು ಅವರ ನಿವಾಸದಲ್ಲೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

murder of daughter in law and grand daughter of former minister dp dhritlhare in raipur
ಮಾಜಿ ಸಚಿವರ ಸೊಸೆ ಮತ್ತು ಮೊಮ್ಮಗಳ ಕೊಲೆ

By

Published : Jan 31, 2021, 6:10 PM IST

ರಾಯ್​ಪುರ/ಛತ್ತೀಸ್​ಗಢ:ಮಾಜಿ ಸಚಿವ ಡಿ.ಪಿ.ಧೃತ್‌ಲಹರೆ ಅವರ ಸೊಸೆ ಮತ್ತು ಮೊಮ್ಮಗಳನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ಮನೆಯ ಒಂದೇ ಕೋಣೆಯಲ್ಲಿ ಇಬ್ಬರೂ ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಕೊಲೆ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಮಾಜಿ ಸಚಿವರ ಸೊಸೆ ಮತ್ತು ಮೊಮ್ಮಗಳ ಕೊಲೆ

ಇನ್ನು ಘಟನೆ ನಡೆದ ಸಮಯದಲ್ಲಿ ಮಾಜಿ ಸಚಿವ ಹಾಗೂ ಅವರ ಪುತ್ರ ಮನೆಯಲ್ಲಿರಲಿಲ್ಲ. ಯಾವುದೋ ಗ್ರಾಮಕ್ಕೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಾಜಿ ಸಚಿವರ ಮಗನ ಹೆಂಡತಿ ಹಾಗೂ ಅವರ 9 ವರ್ಷದ ಮೊಮ್ಮಗಳನ್ನು ಕತ್ತು ಹಿಸುಕಿ ಕೊಂದು ಶವಗಳನ್ನು ದಿವಾನ್​ ಮೇಲೆ ಹಾಕಿ ಹೋಗಿದ್ದಾರೆ. ಇನ್ನು ಘಟನೆ ಸಂಬಂಧ ಮೃತಳ ಪತಿ ತರುಣ್ ಧೃತ್‌ಲಹರೆ ಹಾಗೂ ಇಬ್ಬರು ಯುವಕರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.

ABOUT THE AUTHOR

...view details