ಮುಂಬೈ:ಕೊರೊನಾ ಲಾಕ್ಡೌನ್ನಿಂದಾಗಿ ಹಲವರ ಬದುಕು ಬೀದಿಗೆ ಬಂದಿತ್ತು. ಇದೀಗ ಕೋವಿಡ್ ಭೀತಿ ನಿಧಾನವಾಗಿ ತಗ್ಗುತ್ತಿರುವುದರಿಂದಾಗಿ ಅನ್ಲಾಕ್ ಪ್ರಕ್ರಿಯೆಯೊಂದಿಗೆ ಜನಜೀವನ ನಿಧಾನಕ್ಕೆ ಸಹಜ ಸ್ಥಿತಿಯತ್ತ ಮರಳುತ್ತಿದೆ.
ಮುಂಬೈನಲ್ಲಿ ಡಬ್ಬವಾಲಾಗಳ ಸ್ಥಳೀಯ ಪ್ರಯಾಣಕ್ಕೆ ಗ್ರೀನ್ಸಿಗ್ನಲ್! - Dabewalis in mumbai
ಮುಂಬೈ ನಗರದಲ್ಲಿ ಡಬ್ಬವಾಲಾಗಳ ಸ್ಥಳೀಯ ಪ್ರಯಾಣಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಡಬ್ಬವಾಲಾಗಳು ನಗರದಲ್ಲಿನ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.
ಮುಂಬೈ ಮಹಾನಗರದಲ್ಲಿ ಸಾಕಷ್ಟು ಮಂದಿ ಡಬ್ಬವಾಲಾಗಳಿದ್ದಾರೆ. ಕಂಪನಿಗಳಲ್ಲಿ ಉದ್ಯೋಗಗಳಲ್ಲಿರುವವರಿಗೆ ಅವರವರ ಮನೆಗಳಿಂದ ಆಹಾರದ ಬುತ್ತಿಗಳನ್ನು ಕಚೇರಿಗೆ ಪೂರೈಸುವುದು ಅವರ ಕೆಲಸ. ಕೊರೊನಾ ಲಾಕ್ಡೌನ್ ಬಳಿಕ ಕಳೆದ ಮಾರ್ಚ್ 19 ರಿಂದ ಮುಂಬೈನಲ್ಲಿ ಈ ಡಬ್ಬವಾಲಾಗಳ ಪ್ರಯಾಣಕ್ಕೆ ಬ್ರೇಕ್ ಹಾಕಲಾಗಿತ್ತು. ಹೀಗಾಗಿ ಇವರ ಬದುಕು ಭಾಗಶಃ ಬೀದಿಗೆ ಬಿದ್ದಿತ್ತು. ಹೀಗಾಗಿ ನಗರದಲ್ಲಿ ಡಬ್ಬವಾಲಾಗಳ ಸ್ಥಳೀಯ ಸೇವೆಯನ್ನು ಪ್ರಾರಂಭಿಸಲು ಮುಂಬೈ ಡಬ್ಬಾವಾಲಾ ಅಸೋಸಿಯೇಷನ್ ಸರ್ಕಾರವನ್ನು ಒತ್ತಾಯಿಸಿತ್ತು. ಇಲ್ಲದಿದ್ದರೆ ತಿಂಗಳಿಗೆ ಕನಿಷ್ಠ 3,000 ರೂ.ಗಳ ಸಬ್ಸಿಡಿ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದರು.
ಸದ್ಯ ನಗರದಲ್ಲಿ ಡಬ್ಬವಾಲಾಗಳ ಸೇವೆಗೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ನಿನ್ನೆ ನಡೆದ ಸಂಪುಟ ಸಭೆಯಲ್ಲಿ ಡಬ್ಬವಾಲಾಗಳು ನಗರದಲ್ಲಿನ ಸ್ಥಳೀಯ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.