ಕರ್ನಾಟಕ

karnataka

ETV Bharat / bharat

ಬಹುಪಯೋಗಿ ರಫೇಲ್​ ವಾಯುಪಡೆಯ ಸಾಮರ್ಥ್ಯ ಹೆಚ್ಚಿಸುತ್ತದೆ: ನಿವೃತ್ತ ಐಎಎಫ್ ಅಧಿಕಾರಿ - ವಾಯುಪಡೆ

ರಫೇಲ್​ ಫೈಟರ್ ಜೆಟ್​ಗಳು ಭಾರತೀಯ ವಾಯುಪಡೆಗೆ ಇಂದು ಸೇರ್ಪಡೆಗೊಳ್ಳಲಿದ್ದು, ಈ ಕುರಿತು ನಿವೃತ್ತ ಸಾರ್ಜೆಂಟ್ ಖುಷ್ಬೀರ್ ಸಿಂಗ್​ ದತ್​ ಈಟಿವಿ ಭಾರತದೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.

Khushbir Singh Dutt
ನಿವೃತ್ತ ಐಎಎಫ್ ಅಧಿಕಾರಿ

By

Published : Jul 29, 2020, 1:23 PM IST

ಅಂಬಾಲಾ (ಹರಿಯಾಣ): ಫ್ರಾನ್ಸ್​​ನಿಂದ ಭಾರತಕ್ಕೆ ಬರಲಿರುವ ರಫೇಲ್​ ಜೆಟ್​ಗಳು ಅಂಬಾಲಾ ವಾಯುನೆಲೆಗೆ ತಲುಪುವ ಬೆನ್ನಲ್ಲೇ ರಕ್ಷಣಾ ಇಲಾಖೆಯ ಪರಿಣಿತರೊಬ್ಬರು ''ಬಹುಕೌಶಲ್ಯ ರಫೇಲ್​ ಜೆಟ್​ ಸೇನೆಗೆ ಸೇರ್ಪಡೆ ಮಾಡಿಕೊಳ್ಳುವುದರಿಂದ ಭಾರತೀಯ ವಾಯುಸೇನೆ ಪಾಕ್​ ಹಾಗೂ ಚೀನಾದ ಸೇನೆಗೆ ಸೆಡ್ಡು ಹೊಡಯಲಿದೆ'' ಎಂದು ಬಣ್ಣಿಸಿದ್ದಾರೆ.

ಈಟಿವಿ ಭಾರತದೊಂದಿಗೆ ಮಾತನಾಡಿದ ವಾಯುಪಡೆಯ ನಿವೃತ್ತ ಸಾರ್ಜೆಂಟ್ ಖುಷ್ಬೀರ್ ಸಿಂಗ್​ ದತ್​ ಎಳೆ ಎಳೆಯಾಗಿ ರಫೇಲ್​ನ ಉಪಯೋಗದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಈಟಿವಿ ಭಾರತದೊಂದಿಗೆ ರಫೇಲ್​ ಕುರಿತು ಮಾಹಿತಿ ಹಂಚಿಕೊಂಡ ನಿವೃತ್ತ ಐಎಎಫ್ ಅಧಿಕಾರಿ

ನಮಗೆ ಸದ್ಯಕ್ಕೆ 43 ಏರ್ ಸ್ಕ್ವ್ಯಾಡ್ರನ್​ ದಾಳಿಗೆ ಬೇಕು. ಆದರೆ ನಮ್ಮ ಬಳಿ 34 ಏರ್ ಸ್ಕ್ವ್ಯಾಡ್ರನ್​ಗಳು ಮಾತ್ರ ಇದ್ದು, ಮುಂದಿನ ಕೆಲವು ವರ್ಷಗಳಲ್ಲಿ 8 ಏರ್ ಸ್ಕ್ವ್ಯಾಡ್ರನ್​ಗಳು ವಾಯುಸೇನೆಗೆ ಸೇರ್ಪಡೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.

ಚೀನಾ ಹಾಗೂ ಪಾಕಿಸ್ತಾನ ಭಾರತದ ಮೇಲೆ ಕಣ್ಣಿಟ್ಟಿದ್ದು, ರಫೇಲ್ ಜೆಟ್​ ಫೈಟರ್​ಗಳು ವಾಯುಸೇನೆಗೆ ಸೇರ್ಪಡೆ ಆಗಿದ್ದರಿಂದ ನಮ್ಮ ಶಕ್ತಿ ಹೆಚ್ಚಿದೆ. ಹೀಗಾಗಿ ಆ ಎರಡು ರಾಷ್ಟ್ರಗಳು ಆತಂಕದಲ್ಲಿವೆ ಎಂದಿದ್ದಾರೆ.

ಸುಮಾರು 4 ವರ್ಷಗಳ ಹಿಂದೆ ಭಾರತ ಫ್ರಾನ್ಸ್​ನೊಡನೆ 59 ಸಾವಿರ ಕೋಟಿ ರೂಪಾಯಿಗಳ ಒಪ್ಪಂದ ಮಾಡಿಕೊಂಡಿತ್ತು. ಈ ಒಪ್ಪಂದದ ಪ್ರಕಾರ 36 ರಫೇಲ್​ ಜೆಟ್​ ಫೈಟರ್​ಗಳನ್ನು ಫ್ರಾನ್ಸ್​ ಪೂರೈಸಬೇಕಿತ್ತು. ಈಗ ಮೊದಲ ಹಂತವಾಗಿ ಐದು ಜೆಟ್​ ಫೈಟರ್​ಗಳನ್ನು ಹಸ್ತಾಂತರ ಮಾಡಿದೆ.

ಅಂಬಾಲಾದಲ್ಲಿ ರಫೇಲ್​ಗಳ ಸೇರ್ಪಡೆ ಏಕೆ..?

ಅಂಬಾಲಾ ವಾಯುನೆಲೆ ಅತ್ಯಂತ ಮುಂದುವರೆದ ವಾಯುನೆಲೆಯಾಗಿದೆ. ಸುಮಾರು 150 ರಿಂದ 400 ಕಿಲೋಮೀಟರ್​ಗಳ ಅಂತರದಲ್ಲಿ ಚೀನಾ ಹಾಗೂ ಪಾಕಿಸ್ತಾನದ ಗಡಿಯನ್ನು ಒಳಗೊಳ್ಳುತ್ತದೆ.

ಇದೇ ಕಾರಣದಿಂದ ರಫೇಲ್​ ಜೆಟ್​ಗಳನ್ನು ಇದೇ ವಾಯುನೆಲೆಯಲ್ಲಿ ಸೇನೆಗೆ ಸೇರ್ಪಡೆ ಮಾಡಿಕೊಳ್ಳಲು ತಯಾರಿ ನಡೆಸಲಾಗಿದೆ ಎಂದು ನಿವೃತ್ತ ಸಾರ್ಜೆಂಟ್ ಖುಷ್ಬೀರ್ ಸಿಂಗ್​ ವಿವರಿಸಿದ್ದಾರೆ.

ABOUT THE AUTHOR

...view details