ರಾಯ್‌ಪುರ(ಛತ್ತೀಸ್ಗಢ): ಶ್ರೀಕೃಷ್ಣನ ಜನ್ಮ ದಿನಾಚರಣೆಯಾದ ಜನ್ಮಾಷ್ಟಮಿಯನ್ನು ಇಡೀ ದೇಶದಲ್ಲಿ ಬಹಳ ಆಡಂಬರದಿಂದ ಆಚರಿಸಲಾಗುತ್ತಿದೆ. ಭಾದ್ರಪದ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತದೆ. ಈ ಶುಭ ಸಂದರ್ಭದಲ್ಲಿ ಭಗವಾನ್ ಶ್ರೀಕೃಷ್ಣನ ಮೋಡಿ ಮಾಡುವ ಚಿತ್ರವನ್ನು ಪೂಜಿಸಲಾಗುತ್ತದೆ. ಪುರಾಣಗಳ ಪ್ರಕಾರ, ಶ್ರೀ ಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಭಾದ್ರಪದ ತಿಂಗಳ ಅಷ್ಟಮಿಯಂದು ಜನಿಸಿದನು. ಈ ಹಿನ್ನೆಲೆ ದೇವಾಲಯಗಳಲ್ಲಿ ರಾತ್ರಿಯಿಡೀ ಭಜನಾ-ಕೀರ್ತನೆ ನಡೆಯುತ್ತದೆ. ಉತ್ತರ ಭಾರತದ ಹಲವೆಡೆ ರಾಸ್ಲೀಲಾವನ್ನು ಕೂಡ ಆಯೋಜಿಸಲಾಗುತ್ತದೆ.
ಭಗವಾನ್ ಕೃಷ್ಣನ ಬಾಲ್ಯವಸ್ಥೆಯ ರೂಪವನ್ನು ಭಕ್ತರು ಪೂಜಿಸುತ್ತಾರೆ. ಭಗವಂತನ ಮೂರ್ತಿಗೆ ಸ್ನಾನ ಮಾಡಿಸಿ ನಂತರ ಸ್ವಚ್ಛವಾದ ಬಟ್ಟೆಗಳನ್ನು ಧರಿಸುತ್ತಾರೆ. ಕೃಷ್ಣ ಪರಮಾತ್ಮನಿಗಾಗಿ 56 ಬಗೆಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಗೋಪಾಲನಿಗೆ ಬೆಣ್ಣೆ ಪ್ರಿಯವಾದ್ದರಿಂದ ಬೆಣ್ಣೆ, ಮೊಸರು, ಹಾಲು ಮತ್ತು ಒಣ ಹಣ್ಣುಗಳನ್ನು ಎಡೆಯಲ್ಲಿ ಇಡಲಾಗುತ್ತದೆ.
ಶುಭ ಮುಹೂರ್ತ:
ಈ ವರ್ಷ ಆಗಸ್ಟ್ 11, 12 ಮತ್ತು 13 ರಂದು ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಅಷ್ಟಮಿ ಆಗಸ್ಟ್ 11ರ ಮಂಗಳವಾರ ಬೆಳಗ್ಗೆ 9.6 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 12 ರಂದು 11.16 ಕ್ಕೆ ಕೊನೆಗೊಳ್ಳಲಿದೆ. ಆಗಸ್ಟ್ 11 ರಂದು ಭರಣಿ ನಕ್ಷತ್ರ ಮತ್ತು ಆಗಸ್ಟ್ 12 ರಂದು ಕೃತಿಕ ನಕ್ಷತ್ರವಿದೆ. ಆದ್ದರಿಂದ, ಈ ವರ್ಷದ ಎರಡೂ ದಿನಗಳಲ್ಲಿ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಮಧ್ಯಾಹ್ನ 12ರ ನಂತರವೇ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ.
ಆಗಸ್ಟ್ 11 ರಂದು ಅದ್ವೈತ ಮತ್ತು ಸ್ಮಾರ್ತ ಪಂಥದ ಜನರು ಜನ್ಮಾಷ್ಟಮಿ ಆಚರಿಸಲಿದ್ದಾರೆ. ಭಾದ್ರಪದ ಕೃಷ್ಣ ಪಕ್ಷದ ಅಷ್ಟಮಿ ತಿಥಿ ದಿನಾಂಕ ಆಗಸ್ಟ್ 12 ರಂದು ಬೆಳಗ್ಗೆ 11.17 ರವರೆಗೆ ಇರುತ್ತದೆ. ಶ್ರೀ ಕೃಷ್ಣ ಅಷ್ಟಮಿ ತಿಥಿಯ ರಾತ್ರಿ ಜನಿಸಿದರಿಂದಾಗಿ 11 ನೇ ರಾತ್ರಿ ಬದ್ರಿನಾಥ್ ಧಾಮ್ನಲ್ಲಿ ಜನ್ಮಾಷ್ಟಮಿ ಆಚರಿಸಲಾಗಿದೆ.
ಉತ್ತರ ಭಾರತದಲ್ಲಿ ವೈಷ್ಣವ ಪಂಥದವರಿಗೆ ಅಷ್ಟಮಿ ತಿಥಿ ಮುಖ್ಯವಾಗಿದೆ, ಆದ್ದರಿಂದ ಅವರು ಆಗಸ್ಟ್ 12 ರಂದು ಜನ್ಮಾಷ್ಟಮಿ ಆಚರಿಸುತ್ತಾರೆ. ಆದರೆ, ಶ್ರೀ ಸಂಪದಯ ಮತ್ತು ನಿಂಬಾರ್ಕಾ ಪಂಥದಲ್ಲಿ, ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಆಚರಿಸುವ ಸಂಪ್ರದಾಯವಿದೆ. ಈ ಕಾರಣದಿಂದಾಗಿ, ಈ ಜನರು ಆಗಸ್ಟ್ 13 ರಂದು ರೋಹಿಣಿ ನಕ್ಷತ್ರದಲ್ಲಿ ಜನ್ಮಾಷ್ಟಮಿ ಆಚರಿಸಲಿದ್ದಾರೆ.