ಕರ್ನಾಟಕ

karnataka

ETV Bharat / bharat

ಕನಿಷ್ಠ ಬೆಂಬಲ ಬೆಲೆ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರಲಿದೆ: ರೈತರಿಗೆ ಮೋದಿ ಭರವಸೆ - ರೈತರಿಗೆ ಮೋದಿ ಭರವಸೆ

ರೈತನನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ 2014 ರಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದಿದ್ದೇವೆ ಎಂದು ಪಿಎಂ ಮೋದಿ ರಾಜ್ಯಸಭೆಯಲ್ಲಿ ಹೇಳಿದರು.

PM Modi
ರೈತರಿಗೆ ಮೋದಿ ಭರವಸೆ

By

Published : Feb 8, 2021, 12:46 PM IST

Updated : Feb 8, 2021, 1:28 PM IST

ನವದೆಹಲಿ: ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ) ಈ ಹಿಂದೆಯೂ ಇತ್ತು, ಈಗಲೂ ಇದೆ ಹಾಗೂ ಭವಿಷ್ಯದಲ್ಲಿಯೂ ಇರಲಿದೆ ಎಂದು ಅನ್ನದಾತರಿಗೆ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಭಾಷಣ ಮಾಡಿದ ಪಿಎಂ ಮೋದಿ, ನಾವು ರೈತನನ್ನು ಸಬಲೀಕರಣಗೊಳಿಸುವ ಉದ್ದೇಶದಿಂದ 2014 ರಿಂದ ಕೃಷಿ ಕ್ಷೇತ್ರದಲ್ಲಿ ಬದಲಾವಣೆಗಳನ್ನು ತಂದಿದ್ದೇವೆ. ರೈತ ಸ್ನೇಹಿಯನ್ನಾಗಿ ಮಾಡಲು ಬೆಳೆ ವಿಮಾ ಯೋಜನೆ ಬದಲಾಯಿಸಲಾಗಿದೆ. ಪಿಎಂ - ಕಿಸಾನ್ ಯೋಜನೆ ಜಾರಿಗೆ ತರಲಾಗಿದೆ. ಬಡವರಿಗೆ ಕೈಗೆಟುಕುವ ಪಡಿತರ ಮುಂದುವರಿಯುತ್ತದೆ ಮತ್ತು ಮಂಡಿಗಳನ್ನು ಆಧುನೀಕರಿಸಲಾಗುವುದು. ಎಂಎಸ್​ಪಿ ಎಂದೆಂದಿಗೂ ಇರುವುದು ಎಂದರು.

ರಾಜ್ಯಸಭೆಯಲ್ಲಿ ಪಿಎಂ ಮೋದಿ ಭಾಷಣ

ಇದನ್ನೂ ಓದಿ: ದೇವೇಗೌಡರ ಜೀವನ ರೈತರಿಗೆ ಸಮರ್ಪಿತವಾಗಿದೆ: ದೇವೇಗೌಡರನ್ನ ಹೊಗಳಿ, ಮನಮೋಹನ್ ಸಿಂಗ್​ಗೆ ಮೋದಿ ಟಾಂಗ್​​

ನಾವು ಸಣ್ಣ ರೈತರಿಗಾಗಿ ಕೆಲಸ ಮಾಡುತ್ತಿದ್ದೇವೆ. ಅವರ ಸಂಕಷ್ಟ ಏನೆಂಬುದು ನಮ್ಮ ಸರ್ಕಾರಕ್ಕೆ ತಿಳಿದಿದೆ. ಆದರೆ, ಅವರು ಬ್ಯಾಂಕ್​ ಖಾತೆಯನ್ನೇ ತೆರೆಯುವುದಿಲ್ಲ. ಹೀಗಾಗಿ ಸಾಲಮನ್ನಾದಿಂದ ವಂಚಿತರಾಗಿದ್ದಾರೆ. ಸಣ್ಣ ರೈತರ ಜೀವನವನ್ನು ಸುಧಾರಿಸುವುದು ಅಗತ್ಯವಾಗಿದೆ ಎಂದು ಪ್ರಧಾನಿ ಹೇಳಿದರು.

ಇನ್ನು ಇದೇ ವೇಳೆ, ಪ್ರಧಾನ್ ಮಂತ್ರಿ ಗ್ರಾಮ ಸಡಕ್ ಯೋಜನೆ, ರೈತರ ಉತ್ಪನ್ನಗಳನ್ನು ದೂರದ ಸ್ಥಳಗಳಿಗೆ ತಲುಪಿಸುವ ಕಿಸಾನ್ ರೈಲು ಯೋಜನೆ ಬಗ್ಗೆಯೂ ಮೋದಿ ಮಾಹಿತಿ ನೀಡಿದರು.

Last Updated : Feb 8, 2021, 1:28 PM IST

ABOUT THE AUTHOR

...view details