ಕರ್ನಾಟಕ

karnataka

ಕೋವಿಡ್​​ ಫೈಟ್​​:  ದೇಣಿಗೆ ವಿಷಯದಲ್ಲಿ ಮತ್ತೆ ಉದಾರತೆ ಮೆರೆದ ಗಂಭೀರ್​

By

Published : Apr 6, 2020, 12:09 PM IST

ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್​ ಗಂಭೀರ್​ ಕೋವಿಡ್​-19 ವಿರುದ್ಧದ ಹೋರಾಟದಲ್ಲಿ ನಿರಂತವಾಗಿದ್ದು, ಇದೀಗ ಮತ್ತೊಮ್ಮೆ ತಮ್ಮ ಸಂಸದೀಯ ನಿಧಿಯಿಂದ ದೇಣಿಗೆ ನೀಡಿದ್ದಾರೆ.

MP Gautam Gambhir
MP Gautam Gambhir

ನವದೆಹಲಿ:ಟೀಂ ಇಂಡಿಯಾ ಮಾಜಿ ಕ್ರಿಕೆಟರ್​,ಬಿಜೆಪಿ ಸಂಸದ ಗೌತಮ್​ ಗಂಭೀರ್​ ಕೊರೊನಾ ವಿರುದ್ಧದ ಹೋರಾಟದಲ್ಲಿ ಈಗಾಗಲೇ ಕೈಜೋಡಿಸಿದ್ದು, ಸಂಸದೀಯ ಕ್ಷೇತ್ರದ ನಿಧಿಯಲ್ಲಿ 1 ಕೋಟಿ ರೂ ಹಾಗೂ ತಮ್ಮ ಎರಡು ವರ್ಷದ ಸಂಬಳ ನೀಡಿದ್ದಾರೆ.

ಕೋವಿಡ್​​-19: ಪಿಎಂ CARES ನಿಧಿಗೆ ಎರಡು ವರ್ಷದ ಸಂಬಳ ನೀಡಲು ಮುಂದಾದ ಗಂಭೀರ್​

ಇದರ ಮಧ್ಯೆ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿರುವ ಬಿಜೆಪಿ ಸಂಸದ ಗೌತಮ್​ ಗಂಭೀರ್​, ದೆಹಲಿ ಸರ್ಕಾರಕ್ಕೆ 50 ಲಕ್ಷ ರೂ ಹೆಚ್ಚುವರಿ ದೇಣಿಗೆ ನೀಡಿದ್ದಾರೆ. ದೆಹಲಿ ಸರ್ಕಾರ ವೈದ್ಯಕೀಯ​ ಉಪಕರಣ ಖರೀದಿ ಹಾಗೂ ಕೋವಿಡ್​-19 ಸೋಂಕಿತರಿಗೆ ಈ ಹಣ ಬಳಕೆ ಮಾಡಿಕೊಳ್ಳಬಹುದು ಎಂದು ಗಂಭೀರ್​ ಪತ್ರ ಕೂಡ ಬರೆದಿದ್ದಾರೆ.

ಪತ್ರ ಬರೆದ ಗೌತಮ್ ಗಂಭೀರ್​​

ಕಳೆದ ಎರಡು ವಾರಗಳ ಹಿಂದೆ 50 ಲಕ್ಷ ರೂ ದೆಹಲಿ ಸರ್ಕಾರಕ್ಕೆ ನೀಡಿದ್ದ ಗಂಭೀರ್​, ಇದೀಗ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ ಮತ್ತೆ 50 ಲಕ್ಷ ರೂ ನೀಡಿದ್ದಾರೆ. ತಮ್ಮ ಕ್ಷೇತ್ರದಲ್ಲಿನ ಬಡ ಜನರಿಗೆ ಸಹಾಯ ಮಾಡುತ್ತಿರುವ ಗೌತಮ್​ ಗಂಭೀರ್​, ಆಹಾರದ ಪ್ಯಾಕೆಟ್​ ಸೇರಿದಂತೆ ಅಗತ್ಯ ವಸ್ತು ಪೂರೈಕೆ ಮಾಡುತ್ತಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಟ್ವೀಟ್​ ಮಾಡಿದ್ದ ಗಂಭೀರ್​, ತಮ್ಮಗಾಗಿ ದೇಶ ಏನು ಮಾಡಬಹುದು ಎಂದು ಜನ ಕೇಳುತ್ತಾರೆ.ದೇಶಕ್ಕಾಗಿ ನೀವು ಏನು ಮಾಡಬಹುದು ಎಂದು ನಿಜವಾದ ಪ್ರಶ್ನೆಯಾಗಿದೆ. ಕೊರೋನಾ ಸೋಂಕು ನಿವಾರಣೆ ನಿಟ್ಟಿನಲ್ಲಿ ತಮ್ಮ ಎರಡು ವರ್ಷದ ವೇತನವನ್ನು ಪಿಎಂ ಕೇರ್ಸ್ ನಿಧಿಗೆ ನೀಡುವುದಾಗಿ ಅವರು ಟ್ವೀಟ್​ ಮಾಡಿದ್ದರು.

ABOUT THE AUTHOR

...view details