ನವದೆಹಲಿ:ಕೊರೊನಾ ಸೋಂಕು ತಗುಲಿದ್ದರೂ ತಾಯಂದಿರು ಶಿಶುಗಳಿಗೆ ಎದೆಹಾಲು ಉಣಿಸುವುದನ್ನು ಮುಂದುವರೆಸಬೇಕು. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವಾಲಯ (ಡಬ್ಲ್ಯೂಸಿಡಿ) ಹೇಳಿದೆ.
ಮಾರ್ಗಸೂಚಿಗಳ ಪ್ರಕಾರ, ತಾಯಿ ಕೋವಿಡ್-19 ಸೋಂಕಿಗೆ ಒಳಗಾದರೂ ಶಿಶುಗಳ ಬೆಳವಣಿಗೆಗೆ, ಪೌಷ್ಠಿಕತೆ ಮತ್ತು ಉತ್ತಮ ಆರೋಗ್ಯ ಹಿತದೃಷ್ಟಿಯಿಂದ ಎದೆಹಾಲು ನೀಡಲು ತಾಯಂದಿರಿಗೆ ಭರವಸೆ ನೀಡಬೇಕು ಎಂದು ಸಚಿವಾಲಯವು ಎಲ್ಲಾ ಕ್ಷೇತ್ರದ ಕಾರ್ಯಕರ್ತರು ಮತ್ತು ಆರೋಗ್ಯ ಪೂರೈಕೆದಾರರಿಗೆ ಸೂಚನೆ ನೀಡಿದೆ.
ಸೋಂಕು ತಗುಲಿದ್ದರೂ ಸ್ತನ್ಯಪಾನವು ಮಗುವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ತಾಯಂದಿರಿಗೆ ಧೈರ್ಯ ತುಂಬಿರುವ ಡಬ್ಲ್ಯೂಸಿಡಿ ಸಚಿವಾಲಯವು, ಸ್ತನ್ಯಪಾನದಿಂದ ಆಮ್ನಿಯೋಟಿಕ್ ದ್ರವ ಅಥವಾ ಎದೆ ಹಾಲಿನಲ್ಲಿ ಕೊರೊನಾ ವೈರಸ್ ಕಂಡುಬಂದಿಲ್ಲ. ಅಂದರೆ ಗರ್ಭಾವಸ್ಥೆಯಲ್ಲಿ ಅಥವಾ ಎದೆ ಹಾಲಿನ ಮೂಲಕ ವೈರಸ್ ಹರಡುವುದಿಲ್ಲ. ತಾಯಂದಿರುವ ಭೀತಿಗೆ ಒಳಗಾಗುವುದು ಬೇಡ. ಧೈರ್ಯವಾಗಿರಿ ಎಂದು ಅದು ಸ್ಪಷ್ಟಪಡಿಸಿದೆ.