ಇಂಗ್ಲೆಂಡ್:ಮನೆಯಲ್ಲಿ ಗಂಡ ಹಾಗೂ ಮೂವರು ಮುದ್ದಾದ ಮಕ್ಕಳಿದ್ದರೂ ಹೊಸ ಗೆಳೆಯನೊಂದಿಗೆ ರಾತ್ರಿ ಕಳೆಯಲು ಮಹಿಳೆಯೋರ್ವಳು ಹೊಟೇಲ್‌ಗೆ ತೆರಳಿರುವ ಘಟನೆ ಲಂಡನ್ನಲ್ಲಿ ನಡೆದಿದೆ.
ಮೂವರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿ ಪ್ರಿಯಕರನ ಜೊತೆ ಸರಸ, ಮಹಿಳೆಗೆ 18 ವರ್ಷ ಜೈಲೂಟ!
ಹೊಸದಾಗಿ ಪರಿಚಯವಾದ ಲವರ್ ಜತೆ ರಸ ಕ್ಷಣಗಳನ್ನು ಸವಿಯುವ ಉದ್ದೇಶದಿಂದ ಮೂವರು ಮಕ್ಕಳ ತಾಯಿ ಮಕ್ಕಳನ್ನು ರೂಂನಲ್ಲಿ ಕೂಡಿ ಹಾಕಿ ಹೊಟೇಲ್‌ಗೆ ಹೋಗಿದ್ದಳು.
ತನ್ನ ಮೂವರು ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿರುವ 32 ವರ್ಷದ ಮಹಿಳೆ ಗೆಳೆಯನೊಂದಿಗೆ ಹೊಟೇಲ್‌ಗೆ ತೆರಳಿದ್ದಾಳೆ. ಮುಗ್ಧ ಮಕ್ಕಳ ಬಗ್ಗೆ ಅಮಾನವೀಯವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಅಲ್ಲಿನ ನ್ಯಾಯಾಲಯ ಮಹಿಳೆಗೆ 18 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಇಂಗ್ಲೆಂಡ್ನ ಲ್ಯಾಂಕಶೇರ್‌ನಲ್ಲಿ ಈ ಘಟನೆ ನಡೆದಿದೆ.
ಮೂವರು ಮಕ್ಕಳನ್ನು ಒಂದೇ ಕೋಣೆಯಲ್ಲಿ ಕೂಡಿ ಹಾಕಿರುವ ಮಹಿಳೆ ಆಹಾರವನ್ನೂ ನೀಡದೆ ಉಪವಾಸ ಇರಿಸಿದ್ದಳು. ಈ ವೇಳೆ ಗಂಡ ಬೇರೆಡೆ ಕೆಲಸಕ್ಕೆ ಹೋಗಿದ್ದು ಅದರ ಸದುಪಯೋಗ ಪಡೆದುಕೊಂಡ ಹೆಂಡತಿ ಈ ರೀತಿ ದುರ್ವರ್ತನೆ ತೋರಿದ್ದಾಳೆ. ಈ ಘಟನೆ ಗಂಡನಿಗೆ ಗೊತ್ತಾಗುತ್ತಿದ್ದಂತೆ ಆತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇದೀಗ ಆಕೆಯನ್ನು ಬಂಧಿಸಿ ಶಿಕ್ಷೆ ವಿಧಿಸಲಾಗಿದೆ.