ಕರ್ನಾಟಕ

karnataka

ETV Bharat / bharat

ಅಕಟಕಟ... ಅನೈತಿಕ ಸಂಬಂಧಕ್ಕಾಗಿ ಹೆತ್ತ ಕಂದಮ್ಮನನ್ನೇ ಕೊಂದ ತಾಯಿ!

24 ಗಂಟೆಗಳ ಸುದೀರ್ಘ ವಿಚಾರಣೆ ಮತ್ತು ವೈಜ್ಞಾನಿಕ ಪರೀಕ್ಷೆಯ ನಂತರ ತಾನು ಮಾಡಿದ ಅಪರಾಧವನ್ನು ತಾಯಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Sharanya
ಶರಣ್ಯ

By

Published : Feb 19, 2020, 9:05 AM IST

Updated : Feb 19, 2020, 9:57 AM IST

ಕಣ್ಣೂರು:ಅನೈತಿಕ ಸಂಬಂಧದ ಸಲುವಾಗಿ ಅಂಬೆಗಾಲಿಡುತ್ತಿದ್ದ ತನ್ನ ಒಂದೂವರೆ ವರ್ಷದ ಮಗುವನ್ನು ತಾನೇ ಕೊಂದಿರುವುದಾಗಿ ವಿಚಾರಣೆ ವೇಳೆ ತಾಯಿಯೇ ಬಾಯಿಬಿಟ್ಟಿರುವ ಘಟನೆ ಕಣ್ಣೂರು ಪೊಲೀಸ್​ ಠಾಣೆಯಲ್ಲಿ ನಡೆದಿದೆ.

24 ಗಂಟೆಗಳ ಸುದೀರ್ಘ ವಿಚಾರಣೆ ಮತ್ತು ವೈಜ್ಞಾನಿಕ ಪರೀಕ್ಷೆಯ ನಂತರ ತಾನು ಮಾಡಿದ ಅಪರಾಧವನ್ನು ತಾಯಿ ಒಪ್ಪಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಥೈಯಿಲ್ ಮೂಲದ ಶರಣ್ಯ ಮತ್ತು ಪ್ರಣವ್ ದಂಪತಿ ಪುತ್ರ ವಿಯಾನ್​ ಶವವು ಸೋಮವಾರ ಥೈಯಿಲ್ ಕರಾವಳಿಯ ಕಾಂಕ್ರೀಟ್ ಬ್ಲಾಕ್‌ಗಳೊಳಗೆ ಪತ್ತೆಯಾಗಿದೆ.

ತಾಯಿ ತನ್ನ ಮಗುವನ್ನು ಮನೆಯ ಹೊರಗೆ ಕರೆದುಕೊಂಡು ಹೋಗಿ ಬೀಚ್ ಬಳಿಯ ಕಲ್ಲಿನ ಗೋಡೆಗೆ ತಲೆಯನ್ನು ಗುದ್ದಿ ಸಾಯಿಸಿದ್ದಾಳೆ. ಆ ನಂತರ ಮಗುವನ್ನು ಬೀಚ್​ನಲ್ಲೇ ಬಿಟ್ಟು ಬಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ತನ್ನ ಮಗ ಕಾಣೆಯಾಗಿದ್ದಾನೆ ಎಂದು ಆರೋಪಿಸಿ ಪ್ರಣವ್ ಕಣ್ಣೂರು ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದಾಗ ಪ್ರಣವ್ ಮತ್ತು ಶರಣ್ಯ ಇಬ್ಬರೂ ಘಟನೆಗೆ ಸಂಬಂಧಿಸಿದಂತೆ ವಿರೋಧಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ಇದರಿಂದ ಪೊಲೀಸರು ಅನುಮಾನಗೊಂಡು ತನಿಖೆ ಚುರುಕುಗೊಳಿಸಿದ್ದಾರೆ.

ತಲೆಗೆ ಪೆಟ್ಟು ಬಿದ್ದು ಮಗುವಿನ ಸಾವು ಸಂಭವಿಸಿದೆ ಎಂದು ಮರಣೋತ್ತರ ವರದಿಯಲ್ಲಿ ತಿಳಿಸಲಾಗಿತ್ತು. ಇದರಿಂದ ಮಗುವನ್ನು ಕೊಲೆ ಮಾಡಿರುವುದನ್ನು ಪೊಲೀಸರು ಖಚಿತಪಡಿಸಿದ್ದರು.

ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಣವ್ ಮಗುವನ್ನು ಕೊಂದಿದ್ದಾನೆ ಎಂದು ಶರಣ್ಯ ಪೊಲೀಸರಿಗೆ ಹೇಳಿದರೆ, ಶರಣ್ಯ ಸಹ ಕೊಲೆಗೆ ಭಾಗಿಯಾಗಿದ್ದಾಳೆ ಎಂದು ಪ್ರಣವ್ ಆರೋಪಿಸಿದ್ದಾಳೆ. ಆದರೆ ಮಗುವಿನ ಕೊಲೆ ಮಾಡಿರುವುದು ಶರಣ್ಯ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

Last Updated : Feb 19, 2020, 9:57 AM IST

ABOUT THE AUTHOR

...view details