ಉತ್ತರ ಪ್ರದೇಶ: ತೀವ್ರ ಮಂಜಿನ ವಾತಾವರಣದಿಂದ ಮಾರ್ಗ ಸರಿಯಾಗಿ ಗೋಚರಿಸದೆ ಸುಮಾರು 20 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಘಟನೆ ಪೂರ್ವ ಪೆರಿಫರಲ್ ವೇನಲ್ಲಿ ಸಂಭವಿಸಿದೆ.
ಮಂಜಿನಿಂದ ಮಾರ್ಗ ಗೋಚರಿಸದೆ 20ಕ್ಕೂ ಹೆಚ್ಚು ವಾಹನಗಳು ಡಿಕ್ಕಿ
ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಅಧಿಕವಾಗಿದ್ದು, ಮಧ್ಯಾಹ್ನದ ವೇಳೆಯೂ ಮಂಜು ಮುಸುಕಿದ ವಾತಾವರಣವಿದೆ. ತೀವ್ರ ಮಂಜಿನ ವಾತಾವರಣದಿಂದ ಮಾರ್ಗ ಸರಿಯಾಗಿ ಗೋಚರಿಸದೆ ಸುಮಾರು 20 ಕ್ಕೂ ಹೆಚ್ಚು ವಾಹನಗಳು ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ ಘಟನೆ ಪೂರ್ವ ಪೆರಿಫರಲ್ ವೇನಲ್ಲಿ ಸಂಭವಿಸಿದೆ.
ಘಟನೆಯಲ್ಲಿ 24 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಬಾಗಪತ್ ಜಿಲ್ಲಾ ಆಸ್ಪತ್ರೆ ಮತ್ತು ಗಾಜಿಯಾಬಾದ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಂದು ಮುಂಜಾನೆ ದಟ್ಟವಾದ ಮಂಜು ಆವರಿಸಿದ್ದ ಕಾರಣ ರಸ್ತೆ ಸರಿಯಾಗಿ ಕಾಣಿಸುತ್ತಿರಲಿಲ್ಲ. ಎಕ್ಸ್‌ಪ್ರೆಸ್ ವೇನಲ್ಲಿ ವಾಹನಗಳು ವೇಗವಾಗಿ ಚಲಿಸುವುದರಿಂದ ಮುಂದೆ ಸಾಗುತ್ತಿದ್ದ ವಾಹನದ ವೇಗ ತಿಳಿಯದೆ ಹಿಂದಿನ ವಾಹನ ಡಿಕ್ಕಿ ಹೊಡೆದಿದೆ. ಅದರ ಬೆನ್ನಲ್ಲೇ ಉಳಿದ ವಾಹನಗಳು ಕೂಡ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಉತ್ತರ ಭಾರತದಲ್ಲಿ ಚಳಿಯ ತೀವ್ರತೆ ಅಧಿಕವಾಗಿದ್ದು, ಮಧ್ಯಾಹ್ನದ ವೇಳೆಯೂ ಮಂಜು ಮುಸುಕಿದ ವಾತಾವರಣವಿದೆ. ಈ ಹಿನ್ನೆಲೆ ರಸ್ತೆ ಅಪಘಾತ ಸಂಭವಿಸುತ್ತಿವೆ.