ಕರ್ನಾಟಕ

karnataka

ETV Bharat / bharat

ಮೋದಿ ಸಂಪುಟದಲ್ಲಿ ಈ ಬಾರಿ 19ಕ್ಕೂ ಹೆಚ್ಚು ಹೊಸ ಮುಖಗಳಿಗೆ ಮಣೆ... ರಾಜ್ಯದಿಂದ ಇಬ್ಬರಿಗೆ ಸ್ಥಾನ!

ಮೋದಿ ಸರ್ಕಾರದ 2ನೇ ಅವಧಿಯ ನೂತನ ಸಚಿವ ಸಂಪುಟದಲ್ಲಿ ಒಟ್ಟು 58 ಸಚಿವರಿದ್ದಾರೆ. ಒಟ್ಟು 24 ಸಂಪುಟ ದರ್ಜೆ ಸಚಿವರಿದ್ದರೆ, 24 ರಾಜ್ಯ ಖಾತೆ ಹಾಗೂ 9 ಸ್ವತಂತ್ರ ಖಾತೆ ಸಚಿವರಿದ್ದಾರೆ. ಈ ಬಾರಿ ಸಚಿವ ಸಂಪುಟದಲ್ಲಿ 20 ಮಂದಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

By

Published : May 31, 2019, 1:54 AM IST

Updated : May 31, 2019, 4:30 AM IST

ಮೋದಿ ಸರ್ಕಾರ


ನವದೆಹಲಿ:ಮೋದಿ ಸರ್ಕಾರದ 2ನೇ ಅವಧಿಯ ನೂತನ ಸಚಿವ ಸಂಪುಟದಲ್ಲಿ ಒಟ್ಟು 58 ಸಚಿವರಿದ್ದಾರೆ. ಒಟ್ಟು 24 ಸಂಪುಟ ದರ್ಜೆ ಸಚಿವರಿದ್ದರೆ, 24 ರಾಜ್ಯ ಖಾತೆ ಹಾಗೂ 9 ಸ್ವತಂತ್ರ ಖಾತೆ ಸಚಿವರಿದ್ದಾರೆ. ಈ ಬಾರಿ ಸಚಿವ ಸಂಪುಟದಲ್ಲಿ 20 ಮಂದಿ ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.

ಮೋದಿ ಸರ್ಕಾರದ 2ನೇ ಅವಧಿಯಲ್ಲಿ ಮೊದಲ ಬಾರಿ ಸಚಿವರಾದವರ ಪಟ್ಟಿ ಹೀಗಿದೆ

ಸಂಪುಟ ದರ್ಜೆ ಸಚಿವರು

1. ಎಸ್​. ಜೈಶಂಕರ್​
2. ರಮೇಶ್​ ಪೊಕ್ರೀಯಾಲ್​ ನಿಶಾಂಕ್​
3 ಅರ್ಜುನ್​ ಮುಂಡ
4. ಪ್ರಹ್ಲಾದ್​ ಜೋಶಿ
5. ಅರವಿಂದ್​ ಸಾವಂತ್​

ರಾಜ್ಯ ಖಾತೆ ಸಚಿವರು

1 ಪ್ರಹ್ಲಾದ್​ ಸಿಂಗ್​ ಪಟೇಲ್​
2. ಜಿ.ಕಿಶನ್​ ರೆಡ್ಡಿ
3. ಅನುರಾಗ್​ ಠಾಕೂರ್​
4. ಸಂಜಯ್​ ಶಾಮ್​ರಾವ್​ ಧೋತ್ರೆ
5. ದೇಬೊಶ್ರೀ ಚೌಧರಿ
6. ಕೈಲಾಶ್​ ಚೌದರಿ
7. ಪ್ರತಾಪ್​ ಚಂದ್ರ ಸಾರಂಗಿ
8. ರಾಮೇಶ್ವರ್​ ತೇಲಿ
9. ನಿತ್ಯಾನಂದ ರೈ
10. ರತನ್​ ಲಾಲ್​ ಕಠಾರಿಯ
11. ವಿ. ಮುರುಳಿಧರನ್​
12. ರೇಣುಕಾ ಸಿಂಗ್​ ಸರುತ
13. ಸೋಮ್​ ಪ್ರಕಾಶ್​
14. ಸುರೇಶ್​ ಅಂಗಡಿ

ವಿಶೇಷ ಎಂದರೆ ಈ ಬಾರಿ ಅನಾರೋಗ್ಯದಿಂದಾಗಿ ಕಳೆದ ಬಾರಿ ಅತ್ಯುತ್ತಮ ಸಾಧನೆ ತೋರಿದ ಸಚಿವೆ ಸುಷ್ಮಾ ಸ್ವರಾಜ್​ ಹಾಗೂ ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅರುಣ್​ ಜೇಟ್ಲಿ ಮೋದಿ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ. ಸುಷ್ಮಾ ಸ್ವರಾಜ್​ ಈ ಮೊದಲೇ ಚುನಾವಣೆಯಿಂದ ಹಿಂದೆ ಸರಿದಿದ್ದರು. ಅರುಣ್​ ಜೇಟ್ಲಿ ಮೋದಿ ಅವರಿಗೆ ಪತ್ರ ಬರೆದು ತಮಗೆ ವಿಶ್ರಾಂತಿ ಬೇಕೆಂದು ಮನವಿ ಮಾಡಿದ್ದರು.

Last Updated : May 31, 2019, 4:30 AM IST

ABOUT THE AUTHOR

...view details