ಹೈದರಾಬಾದ್ :ನಾವೆಲ್ಲಾ ಕೋತಿ ಎಂದು ಜರಿಯೋ ಈ ಮೂಕ ಪ್ರಾಣಿಗೆ ನೀರನ್ನು ಉಳಿಸುವ ಬಗ್ಗೆ ಅದೆಂತಾ ಕಾಳಜಿ ನೋಡಿ. ಬಾಯಾರಿ ಬೆಂಡಾಗಿದ್ದ ಈ ಕೋತಿಗೆ, ಅದೆಲ್ಲೋ ಇದ್ದ ನಲ್ಲಿಯೊಂದರಲ್ಲಿ ನೀರು ಬರುತ್ತಿರೋದು ಗೊತ್ತಾಗಿದೆ. ಹೊಟ್ಟೆ ತುಂಬಾ ನೀರು ಕುಡಿದು ಬಾಯಾರಿಕೆ ನೀಗಿಸಿಕೊಂಡ ಈ ಕಪಿರಾಯ ಮತ್ತೆ ಮಾಡಿದ್ದೇನು ಅಂತಾ ನೀವೇ ನೋಡಿ.
ಹಸಿದಾಗ ಅನ್ನ, ಬಾಯಾರಿದಾಗ ನೀರು. ಇದು ಸಕಲ ಜೀವರಾಶಿಗಳಿಗೂ ಅಗತ್ಯ. ಆದರೆ, ಭೂಮಿ ಮೇಲೆ ಲಭ್ಯವಿರೋ ಇಂತಹ ಸಂಪನ್ಮೂಲಗಳ ಸಭ್ಯ ಬಳಕೆಗಿಂತ ಪೋಲು ಮಾಡುವವರ ಸಂಖ್ಯೆಯೇ ಹೆಚ್ಚು. ನೀರು ಕುಡಿಯುವವರಿಗಿಂತ ಚೆಲ್ಲುವವರೇ ಹೆಚ್ಚು. ಸ್ನಾನದ ವೇಳೆ ಶವರ್ ನೀರನ್ನು ಅನಗತ್ಯವಾಗಿ ಬಳಸುವುದು, ಸರಿಯಾಗಿ ನಲ್ಲಿ ತಿರುಗಿಸದೆ ನೀರು ಪೋಲು ಮಾಡುವುದು, ಇದೆಲ್ಲಾ ಮನುಷ್ಯ ಜೀವಿಗೆ ಒಂದು ಕೆಟ್ಟ ಚಾಳಿಯಾಗಿಬಿಟ್ಟಿದೆ. ಆದರೆ, ಈ ಕೋತಿ ಮಾತ್ರ ಮನುಷ್ಯನಿಗಿಂತ ಹೆಚ್ಚು ನೀರಿನ ಉಳಿತಾಯದ ಬಗ್ಗೆ ಕಾಳಜಿ ಹೊಂದಿದೆ.
ನೀರಿನ ಅಗತ್ಯ ಮತ್ತು ಮಹತ್ವವನ್ನು ಯಾರೋ ಮನುಷ್ಯರು ಬಳಸುವುದನ್ನು ನೋಡಿ ಕಲಿತಿರುವ ಕೋತಿಯೊಂದು, ತಾನು ಬಾಯಾರಿದಾಗ ನೀರು ಕುಡಿದು ಶಿಸ್ತಿನಿಂದ ನಲ್ಲಿಯನ್ನು ತಿರುಗಿಸಿ ನೀರು ಬಂದ್ ಮಾಡಿದೆ. ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.