ಅಹಮದಾಬಾದ್, (ಗುಜರಾತ್) : ತವರು ರಾಜ್ಯ ಗುಜರಾತ್‌ನ ಗಾಂಧಿನಗರ ಕ್ಷೇತ್ರದ ಮತಗಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತದಾನಕ್ಕೆ ತೆರಳುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ತಾಯಿ ಹೀರಾಬೆನ್‌ರಿಂದ ಆಶೀರ್ವಾದ ಪಡೆದರು. ಅಹ್ಮದಾಬಾದ್‌ನಲ್ಲಿರುವ ತಾಯಿ ಹೀರಾಬೆನ್ ನಿವಾಸಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ, ಕಾಲಿಗೆರಗಿ ಆಶೀರ್ವಾದ ಪಡೆದರು.
ಮತದಾನಕ್ಕೂ ಮುನ್ನ ತಾಯಿ ದೇವರ ದರ್ಶನ.. ತವರಿನಲ್ಲಿ ಹಕ್ಕು ಚಲಾಯಿಸಿದ ಮೋದಿ! - kannada newspaper
ಮತದಾನಕ್ಕೆ ತೆರಳುವ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅಹ್ಮದಾಬಾದ್‌ನಲ್ಲಿರುವ ತಾಯಿ ಹೀರಾಬೆನ್ ನಿವಾಸಕ್ಕೆ ತೆರಳಿ ಆಶೀರ್ವಾದ ಪಡೆದರು.
ತಾಯಿ ಮಗನಿಗೆ ಸಿಹಿ ತಿನ್ನಿಸಿದ್ರೇ, ಅಮ್ಮನಿಗೆ ಮೋದಿ ಕೂಡ ಸ್ವೀಟ್ ತಿನ್ನಿಸಿದರು. ಬಳಿಕ ನರೇಂದ್ರ ಮೋದಿಗೆ ಶಾಲು ನೀಡಿದರು ತಾಯಿ. ಕಾಲಿಗೆ ಬಿದ್ದ ಮಗನಿಗೆ ಎರಡು ಕೈಗಳನ್ನೂ ತಲೆಮೇಲಿಟ್ಟು ತಾಯಿ ಹೀರಾಬೆನ್ ಆಶೀರ್ವಾದ ಮಾಡಿದರು. ಇವತ್ತು ಮತದಾನಕ್ಕೆ ತೆರಳು ಮೊದಲೇ ರಸ್ತೆಯ ಎರಡೂ ಕಡೆಗೆ ನಿಂತಿದ್ದ ಜನರತ್ತ ಪ್ರಧಾನಿ ನರೇಂದ್ರ ಮೋದಿ ಕೈಮುಗಿದರು. ಬೂತ್‌ನ ಹತ್ತಿರ ಮಗುವೊಂದನ್ನ ಎತ್ತಿ ಮೋದಿ ಮುದ್ದಿಸಿದ್ದು ವಿಶೇಷವಾಗಿತ್ತು. ಮತದಾನಕ್ಕೆ ತೆರಳಿದ ವೇಳೆ ಬೂತ್‌ನಲ್ಲಿ ಮೋದಿಗೆ ಅಮಿತ್ ಶಾ ಸಾಥ್ ನೀಡಿದರು.
ಅಹ್ಮದಾಬಾದ್‌ನ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸ್ಪರ್ಧಿಸಿದ್ದಾರೆ. ಇದೇ ಕ್ಷೇತ್ರದ ರಾಣಿಪ್ ಬೂತ್‌ಗೆ ತೆರಳಿ ಪ್ರಧಾನಿ ಮೋದಿ ತಮ್ಮ ಹಕ್ಕು ಚಲಾಯಿಸಿದರು. ಮತಾದಾನದ ಬಳಿಕ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರನ್ನ ಮೋದಿ ಕೈಬೀಸಿದರು. ಹಕ್ಕು ಚಲಾಯಿಸಿದ್ದಕ್ಕೆ ಕಿರುಬೆಳ ಮೇಲಿನ ಶಾಹಿಯನ್ನ ಜನರತ್ತ ತೋರಿಸಿದರು. ರಸ್ತೆಗುಂಟ ನಿಂತಿದ್ದ ಜನರು ಮೋದಿ ಮೋದಿ ಅಂತಾ ಜಯಘೋಷ ಕೂಗಿದರು. ರಸ್ತೆಯಲ್ಲಿ ನಡೆದುಕೊಂಡು ಹೋಗುವ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಎಸ್‌ಪಿಜಿ ಬಿಗಿ ಭದ್ರತೆಯನ್ನ ನೀಡಲಾಗಿತ್ತು.