ಮಿರಾಜ್ಪುರ: ಪ್ರಧಾನಿ ಮೋದಿ ಸಂಸತ್ ಕ್ಷೇತ್ರ ವಾರಣಾಸಿಯಲ್ಲಿ ಜಲಯಾನದ ಮೂಲಕ ಪ್ರಚಾರ ಕೈಗೊಂಡಿರುವ ಪೂರ್ವ ಉತ್ತರಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಇಂದು ಮಿರಾಜ್ಪುರದ ವಿಂಧ್ಯಾವಾಸಿನಿ ದೇಗುಲಕ್ಕೆ ಭೇಟಿ ನೀಡಿದರು.
ಇದೇ ವೇಳೆ, ಸೀತಾ ಸಮಾಹಿತ್ ಸ್ಥಳ ಹಾಗೂ ಖ್ವಾಜಾ ನಾಬ್ ಇಸ್ಮೈಲ್ ಚಿಸ್ತಿ ದರ್ಗಾಕ್ಕೂ ಭೇಟಿ ನೀಡಿದರು. ಚುನಾವಣೆ ನಿಮಿತ್ತ ಟೆಂಪಲ್ ರನ್ ಮೂಲಕ ಜನರನ್ನು ಸೆಳೆಯುವ ಉದ್ದೇಶ ಅವರದಾಗಿತ್ತು. ಕಾಶಿ ವಿಶ್ವೇಶ್ವರ ದೇಗುಲಕ್ಕೆ ಭೇಟಿಗೆ ಮಾತ್ರ ಅವರಿಗೆ ಅನುಮತಿ ದೊರೆಯಲಿಲ್ಲ ಎಂದು ತಿಳಿದುಬಂದಿದೆ.