ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಚುನಾವಣೆ ಪ್ರಚಾರದ ಭರಾಟೆ ನಡೆಯುವೆಯೂ ಪ್ರಧಾನಿ ಮೋದಿ ಜತೆ ರಾಜಕೀಯೇತರ ವಿಷಯಗಳ ಬಗ್ಗೆ ವೆರಿ ವೆರಿ ಇಂಟ್ರೆಸ್ಟಿಂಗ್ ಸಂದರ್ಶನ ನಡೆಸಿದ್ದಾರೆ.
ಜನಸಾಮಾನ್ಯರಿಗೆ ಇರುವ ಹಲವು ಕುತೂಹಲಕಾರಿ ವಿಷಯಗಳ ಬಗ್ಗೆ ಪ್ರಧಾನಿ ಮೋದಿ, ನಟ ಅಕ್ಷಯ್ ಕುಮಾರ್ ಮುಂದೆ ಬಿಚ್ಚಿಟ್ಟಿದ್ದಾರೆ.
ರಾಜಕೀಯವಾಗಿ ವಿರೋಧ ವ್ಯಕ್ತಪಡಿಸುವ ನಾಯಕರಲ್ಲಿ ನಿಮ್ಮ ಗೆಳೆಯರು ಯಾರು ಎಂಬ ಪ್ರಶ್ನೆಗೆ ಪ್ರಧಾನಿ ಮಾರ್ಮಿಕವಾಗಿ ಉತ್ತರಿಸಿದ್ದಾರೆ. ಯೆಸ್ ಪ್ರತಿಪಕ್ಷಗಳಲ್ಲಿ ಹಲವು ಆತ್ಮೀಯ ಸ್ನೇಹಿತರಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಜಿದ್ದಿಗೆ ಬಿದ್ದವರಂತೆ ಹೋರಾಡುತ್ತಿರುವ ಮಮತಾ ಬ್ಯಾನರ್ಜಿ ನನ್ನ ನೆಚ್ಚಿನ ಸ್ನೇಹಿತೆ ಅಂದಿದ್ದಾರೆ ಮೋದಿ.