ರಿಷಿಕೇಶ್:ರಾಜಾಜಿ ಹುಲಿ ಮೀಸಲು ಅರಣ್ಯದ ವನ್ಯಜೀವಿಗಳ ಮೇಲ್ವಿಚಾರಣೆ ಮತ್ತು ಕಣ್ಗಾವಲು ವ್ಯವಸ್ಥೆಯನ್ನು ಆ್ಯಂಡ್ರಾಯ್ಡ್ ಆಧಾರಿತ ಅಪ್ಲಿಕೇಷನ್ನೊಂದಿಗೆ ಲಿಂಕ್ ಮಾಡಲಾಗಿದೆ.
ಹುಲಿಗಳ ಮೇಲ್ವಿಚಾರಣೆ, ಕಣ್ಗಾವಲು ಹಾಗೂ ಸಂರಕ್ಷಣೆಗಾಗಿ M-STrIPES ಆ್ಯಪ್ ಬಳಕೆಯಾಗುತ್ತಿದೆ ಎಂದು ಉತ್ತರಾಖಂಡದ ರಾಜಾಜಿ ಹುಲಿ ಮೀಸಲು ಅರಣ್ಯದ ನಿರ್ದೇಶಕ ಪಿ.ಕೆ. ದತ್ತ ತಿಳಿಸಿದರು.
ಈ ಅಪ್ಲಿಕೇಶನ್ ಅರಣ್ಯ ಸಿಬ್ಬಂದಿಗೆ ಹೆಚ್ಚಿನ ಜವಾಬ್ದಾರಿ ನೀಡುವುದರ ಜೊತೆಗೆ ಮೀಸಲು ಅರಣ್ಯದ ಕಣ್ಗಾವಲು ವ್ಯವಸ್ಥೆಯನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ರು.
ವನ್ಯಜೀವಿಗಳಿಗೆ ಅಪಾಯ ಉಂಟುಮಾಡುವ ಯಾವುದೇ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾ ಇರಿಸಲು M-STrIPES ಅಪ್ಲಿಕೇಶನ್ನು ಬಳಸಲಾಗುತ್ತಿದೆ ಎಂದರು.
ಡೆಹ್ರಾಡೂನ್ ಮೂಲದ ವನ್ಯಜೀವಿ ಸಂಸ್ಥೆಯು 2010ರಲ್ಲಿ ಈ ಆ್ಯಪ್ ಅಭಿವೃದ್ಧಿಪಡಿಸಿತ್ತು. ಈಗಾಗಲೇ ದೇಶದ ಹಲವು ರಾಜ್ಯಗಳು ವನ್ಯಜೀವಿ ಸಂರಕ್ಷಣೆಗಾಗಿ ಈ ಆ್ಯಪ್ಗಳನ್ನು ಬಳಸುತ್ತಿವೆ ಎಂದು ಅವರು ಹೇಳಿದ್ರು.