ಕಣ್ಣೂರು:ಕೇರಳ ಜಿಲ್ಲೆಯ ಪರಿಯಾರಂನಲ್ಲಿ ಅಪ್ರಾಪ್ತ ಸಹೋದರಿಯರಿಬ್ಬರು ತಮ್ಮ ಸಂಬಂಧಿಕರಿಂದಲೇ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ.
13 ಮತ್ತು 16 ವರ್ಷದ ಸಹೋದರಿಯರಿಬ್ಬರು ಕಿರುಕುಳಕ್ಕೊಳಗಾಗಿದ್ದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಂತ್ರಸ್ತೆಯರ ತಾಯಿ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ.

ಇಬ್ಬರನ್ನೂ ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಪರಿಯಾರಂ ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಸಂಬಂಧಿಯನ್ನು ಬೆಂಬಲಿಸಿದ್ದರಿಂದ ತಾಯಿಯನ್ನು ಬಂಧಿಸಲಾಗಿದೆ.
ಬಾಲಕಿಯ ಸಂಬಂಧಿ 2016 ರಿಂದ ಕಿರುಕುಳ ನೀಡುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ. ಕೌಟುಂಭಿಕ ಸಮಸ್ಯೆಯಿಂದ ಬಾಲಕಿಯರು ಪೋಷಕರಿಂದ ದೂರವಿದ್ದರು. ಕಿರುಕುಳ ನೀಡುತ್ತಿದ್ದ ವ್ಯಕ್ತಿ ಬಾಲಕಿಯರ ಚಿಕ್ಕಪ್ಪನೆಂದು ತಿಳಿದು ಬಂದಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು ಕೋವಿಡ್ ವೀಕ್ಷಣಾ ಕೇಂದ್ರಕ್ಕೆ ಸ್ಥಳಾಂತರಿಸಿದ್ದಾರೆ.