ಕರ್ನಾಟಕ

karnataka

ETV Bharat / bharat

ಬೆತ್ತಲೆ ಮಾಡಿ ಪ್ರೇಯಸಿ ಮೇಲೆ ಬ್ಲೇಡ್​​ನಿಂದ ಬಾಯ್​​ಫ್ರೆಂಡ್​​ ದಾಳಿ​​! - ಬಾಯ್​​ಫ್ರೆಂಡ್​​ ದಾಳಿ

ಕಳೆದ ಮೂರು ತಿಂಗಳಿಂದ ಯುವಕನೊಂದಿಗೆ ಪರಿಚಿತವಾಗಿದ್ದ ಬಾಲಕಿ, ದೈಹಿಕ ಸಂಬಂಧ ಸಹ ಹೊಂದಿದ್ದಳು ಎಂದು ಸಹಾಯಕ ಪೊಲೀಸ್​ ಕಮಿಷನರ್​ ನರಸಿಂಹ ರೆಡ್ಡಿ ತಿಳಿಸಿದ್ದಾರೆ.

ಆರೋಪಿ

By

Published : Mar 9, 2019, 11:00 PM IST

ಹೈದರಾಬಾದ್: 16 ವರ್ಷದ ಪ್ರೇಯಸಿ ಮೇಲೆ ಆಕೆಯ ಬಾಯ್​ಫ್ರೆಂಡ್​ ಬ್ಲೇಡ್​​ನಿಂದ ಹಲ್ಲೆ ಮಾಡಿರುವ ಘಟನೆ ಹೈದರಾಬಾದ್​​ನ ಡಿಬಿಆರ್​ ಮಿಲ್ಸ್​​ನಲ್ಲಿ ನಡೆದಿದೆ.

ಕಳೆದ ಮೂರು ತಿಂಗಳಿಂದ ಯುವಕನೊಂದಿಗೆ ಪರಿಚಿತವಾಗಿದ್ದ ಬಾಲಕಿ, ದೈಹಿಕ ಸಂಬಂಧ ಸಹ ಹೊಂದಿದ್ದಳು ಎಂದು ಸಹಾಯಕ ಪೊಲೀಸ್​ ಕಮಿಷನರ್​ ನರಸಿಂಹ ರೆಡ್ಡಿ ತಿಳಿಸಿದ್ದಾರೆ. ಜತೆಗೆ ಬೇರೊಬ್ಬನೊಂದಿಗೂ ಫೋನ್​ನಲ್ಲಿ ಮಾತನಾಡುತ್ತಿದ್ದಳಂತೆ. ಇದರಿಂದ ಆಕ್ರೋಶಗೊಂಡ ಬಾಯ್​ಫ್ರೆಂಡ್​​ ಆಕೆಯ ಮೇಲೆ ಬ್ಲೇಡ್​​ನಿಂದ ಹಲ್ಲೆ ಮಾಡಿದ್ದು, ಅದರ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ. ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಆತನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲ್ಲೆಯಿಂದ ಬಾಲಕಿ ದೇಹದ ತುಂಬ ಗಾಯಗಳಾಗಿದ್ದು, ಆಕೆಯನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ದಾಳಿ ನಡೆಸಿರುವ ವೇಳೆ ಯುವಕ ಸಂಪೂರ್ಣವಾಗಿ ಡ್ರಗ್ಸ್​ ತೆಗೆದುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದು, ಈಗಾಗಲೇ ಆತನ ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details