ನವದೆಹಲಿ:'ಡಿಫೆನ್ಸ್ ಅಕ್ವಿಸಿಷನ್ ಪ್ರೊಸೀಜರ್ (ಡಿಎಪಿ) 2020' ಎಂಬ ಶೀರ್ಷಿಕೆಯ ರಕ್ಷಣಾ ಖರೀದಿ ಪ್ರಕ್ರಿಯೆ (ಡಿಪಿಪಿ) ಯ ಎರಡನೇ ಕರಡನ್ನು ರಕ್ಷಣಾ ಸಚಿವಾಲಯ ಅಪ್ಲೋಡ್ ಮಾಡಿದೆ. ಇದಕ್ಕಾಗಿ ವಿವಿಧ ಮಧ್ಯಸ್ಥಗಾರರು ಹಾಗೂ ಸಾರ್ವಜನಿಕರಿಂದ ಸಲಹೆ ಮತ್ತು ಅಭಿಪ್ರಾಯಗಳನ್ನು ಸಚಿವಾಲಯ ಆಹ್ವಾನಿಸಿದೆ.
"ಡಿಪಿಪಿ 2020ರ ಮೊದಲ ಕರಡನ್ನು ವೆಬ್-ಹೋಸ್ಟ್ ಮಾಡಲಾಗಿತ್ತು. ಈ ಬಗ್ಗೆ 2020ರ ಏಪ್ರಿಲ್ 17 ರೊಳಗೆ ವಿವಿಧ ಮಧ್ಯಸ್ಥಗಾರರಿಂದ ಅಭಿಪ್ರಾಯ, ಶಿಫಾರಸುಗಳು ಹಾಗೂ ಸಲಹೆಗಳನ್ನು ಕೋರಲಾಗಿತ್ತು. ಬಳಿಕ ಆ ಅವಧಿಯನ್ನು ಮೇ 8ಕ್ಕೆ ವಿಸ್ತರಿಸಲಾಯಿತು. ಅಂದಿನಿಂದ ವಿವಿಧ ಮಧ್ಯಸ್ಥಗಾರರು, ಸೇವೆಗಳು ಹಾಗೂ ವಿವಿಧ ಉದ್ಯಮಗಳಿಂದ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಇದು 10,000ಕ್ಕೂ ಹೆಚ್ಚು ಪುಟಗಳನ್ನು ದಾಟಿದೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.