ಕುಲ್ಗಾಮ್ (ಜಮ್ಮು ಮತ್ತು ಕಾಶ್ಮೀರ): ಉಗ್ರವಾದಿಗಳ ಅಡಗುತಾಣವೊಂದರ ಮೇಲೆ ದಾಳಿ ಮಾಡಿದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶಸ್ತ್ರಾಸ್ತ್ರ ಹಾಗೂ ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಉಗ್ರರು ಅಡಗಿರುವ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಹಾಗೂ ಸೇನಾ ಸಿಬ್ಬಂದಿ ಕುಲ್ಗಾಮ್ನ ನಂದಿಮಾರ್ಗ್ನ ಪ್ರದೇಶವೊಂದರ ಮೇಲೆ ದಾಳಿ ನಡೆಸಿದ್ದರು.
ಉಗ್ರರ ತಾಣಗಳ ಮೇಲೆ ದಾಳಿ; ಶಸ್ತ್ರಾಸ್ತ್ರ, ಐಇಡಿ ಸಲಕರಣೆ ವಶ - ಗುಂಡಿನ ಚಕಮಕಿ
ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳ ಹೆಚ್ಚಾಗಿದ್ದು, ಭದ್ರತಾ ಪಡೆಗಳು ಕಟ್ಟೆಚ್ಚರ ವಹಿಸಿವೆ. ಉಗ್ರರ ಅಡಗುತಾಣವೊಂದರ ಮೇಲೆ ದಾಳಿ ಮಾಡಿದ ಯೋಧರು ಶಸ್ತ್ರಾಸ್ತ್ರ ಹಾಗೂ ಬಾಂಬ್ ತಯಾರಿಸುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
Militants flee Kulgam home
ಭದ್ರತಾ ಪಡೆ ಹಾಗೂ ಉಗ್ರವಾದಿಗಳ ಮಧ್ಯೆ ಕೆಲ ಹೊತ್ತು ಗುಂಡಿನ ಚಕಮಕಿ ನಡೆದ ನಂತರ ಉಗ್ರರು ತಾವು ಅಡಗಿಕೊಂಡಿದ್ದ ಸ್ಥಳದಿಂದ ಪರಾರಿಯಾಗಿದ್ದರು. ಉಗ್ರರು ಅಡಗಿದ ಸ್ಥಳದಿಂದ ಒಂದು PIKA LMG ಗನ್ ಹಾಗೂ ಐಇಡಿ ಬಾಂಬ್ ತಯಾರಿಸಲು ಬಳಸಲಾಗುವ ಮದ್ದು ಹಾಗೂ ಇನ್ನಿತರ ವಸ್ತುಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಗುಂಡಿನ ಚಕಮಕಿ ಆರಂಭವಾಗುತ್ತಲೇ ಉಗ್ರರು ಪರಾರಿಯಾಗಿದ್ದಾರೆ. ಅವರ ಪತ್ತೆಗೆ ಶ್ವಾನದಳದ ನೆರವು ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.