ಪುಲ್ವಾಮಾ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ರಾತ್ರಿಯಿಡೀ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಉಗ್ರ ಹತನಾಗಿದ್ದಾನೆ. ಇನ್ನೋರ್ವ ಉಗ್ರ ಶರಣಾಗಿದ್ದಾನೆ ಎಂದು ಕಾಶ್ಮೀರ ವಲಯ ಪೊಲೀಸರು ಮಾಹಿತಿ ನೀಡಿದ್ದಾರೆ.
ಪುಲ್ವಾಮಾ ಎನ್ಕೌಂಟರ್: ಓರ್ವ ಉಗ್ರ ಹತ, ಇನ್ನೋರ್ವ ಶರಣಾಗತಿ - ಪುಲ್ವಾಮಾದಲ್ಲಿ ಉಗ್ರ ಹತ
ಇಂದು ಬೆಳ್ಳಂ ಬೆಳಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ಎನ್ಕೌಂಟರ್ ನಡೆಸಿದ ಭದ್ರತಾ ಪಡೆ ಉಗ್ರನನ್ನು ಹೊಡೆದುರುಳಿಸಿದ್ದು, ಇನ್ನೋರ್ವ ಉಗ್ರ ಶರಣಾಗಿದ್ದಾನೆ.
ಪುಲ್ವಾಮಾ ಎನ್ಕೌಂಟರ್
ಉಗ್ರರು ಅಡಗಿರುವ ನಿಖರ ಮಾಹಿತಿ ಮೇರೆಗೆ ಭದ್ರತಾ ಸಿಬ್ಬಂದಿ ನಿನ್ನೆ ದಕ್ಷಿಣ ಕಾಶ್ಮೀರದ ಪಾಂಪೋರ್ನ ಲಾಲ್ಪೋರಾ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು. ಈ ವೇಳೆ ಉಗ್ರರು ಗುಂಡು ಹಾರಿಸಿದ್ದು, ಇಬ್ಬರು ನಾಗರೀಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಳಿಕ ಲಾಲ್ಪೋರಾ ಪ್ರದೇಶದವನ್ನು ಸುತ್ತುವರಿದ ಭದ್ರತಾ ಪಡೆ ಇಂದು ಬೆಳ್ಳಂ ಬೆಳಗ್ಗೆ ಎನ್ಕೌಂಟರ್ ನಡೆಸಿ ಉಗ್ರನನ್ನು ಹೊಡೆದುರುಳಿಸಿದ್ದು, ಕಾರ್ಯಾಚರಣೆ ಮುಂದುವರೆಸಿದೆ.
Last Updated : Nov 6, 2020, 11:36 AM IST