ಕರ್ನಾಟಕ

karnataka

ಕಾಲೇಜ್​​​ ವಿದ್ಯಾರ್ಥಿನಿ ಮೇಲೆ ಹರಿದ ಟ್ರಕ್​​​... ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ!

ಕಾಲೇಜ್​ ವಿದ್ಯಾರ್ಥಿನಿವೋರ್ವಳ ಮೇಲೆ ಟ್ರಕ್​ ಹರಿದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ನಾಂದೇಡ್​​ದಲ್ಲಿ ನಡೆದಿದೆ.

By

Published : Jan 23, 2020, 1:11 AM IST

Published : Jan 23, 2020, 1:11 AM IST

Updated : Jan 23, 2020, 6:38 AM IST

ETV Bharat / bharat

ಕಾಲೇಜ್​​​ ವಿದ್ಯಾರ್ಥಿನಿ ಮೇಲೆ ಹರಿದ ಟ್ರಕ್​​​... ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ!

College student dies
ಕಾಲೇಜು ವಿದ್ಯಾರ್ಥಿನಿ ಮೇಲೆ ಹರಿದ ಟ್ರಕ್

ನಾಂದೇಡ್​​(ಮಹಾರಾಷ್ಟ್ರ):ಸ್ಕೂಟರ್​​ ಮೇಲೆ ಕಾಲೇಜ್​ಗೆ ತೆರಳುತ್ತಿದ್ದ ವೇಳೆ ರಸ್ತೆ ಮೇಲೆ ಜಾರಿ ಬಿದ್ದಿರುವ ಪರಿಣಾಮ ವಿದ್ಯಾರ್ಥಿನಿವೋರ್ವಳ ಮೇಲೆ ಟ್ರಕ್​ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕಾಲೇಜು ವಿದ್ಯಾರ್ಥಿನಿ ಮೇಲೆ ಹರಿದ ಟ್ರಕ್

ಮಹಾರಾಷ್ಟ್ರದ ನಾಂದೇಡ್​​​ನ ಮಾಲೆಗಾಂವ್​ ರೋಡ್​​ನಲ್ಲಿ ಬಿಸಿಎ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯರಿಬ್ಬರು ಸ್ಕೂಟರ್​ ಮೇಲೆ ತೆರಳುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಜಾರಿ ರಸ್ತೆ ಮೇಲೆ ಬಿದ್ದಿದ್ದಾರೆ. ಈ ವೇಳೆ ಹಿಂದಿನಿಂದ ಬಂದ ಟ್ರಕ್​​​ ನಿಕಿತಾ ಜಾಧವ್​(21) ಮೇಲೆ ಹರಿದು ಹೋಗಿದೆ. ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ನಿಕಿತಾ ಎರಡನೇ ವರ್ಷದ ಬಿಸಿಎ ಓದುತ್ತಿದ್ದಳು ಎಂದು ತಿಳಿದು ಬಂದಿದೆ.

ಇನ್ನು ರಸ್ತೆ ಕಾಮಗಾರಿ ನಡೆಯುತ್ತಿದ್ದು, ರಸ್ತೆಯಲ್ಲಿ ಕೆಲವೊಂದು ಕಾಮಗಾರಿ ಬಾಕಿ ಉಳಿದ ಪರಿಣಾಮ ಸ್ಕೂಟರ್​​ ಜಾರಿ ಕೆಳಗೆ ಬಿದ್ದಿರುವ ಪರಿಣಾಮ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಜತೆಗೆ ಕಾಮಗಾರಿ ನಡೆಯುತ್ತಿದ್ದ ಬಗ್ಗೆ ಯಾವುದೇ ಫಲಕವನ್ನು ಅಳವಡಿಕೆ ಮಾಡಿರಲಿಲ್ಲ ಎಂದು ತಿಳಿದು ಬಂದಿದೆ.

Last Updated : Jan 23, 2020, 6:38 AM IST

ABOUT THE AUTHOR

...view details