ಕರ್ನಾಟಕ

karnataka

ETV Bharat / bharat

ಮಿಂಚಿನ ಕಾರ್ಯಾಚರಣೆ: ಬರೋಬ್ಬರಿ 20 ಕೋಟಿ ಮೌಲ್ಯದ ಮಿಯಾವ್ ಮಿಯಾವ್ ಡ್ರಗ್ಸ್ ವಶಕ್ಕೆ

ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಡ್ರಗ್ಸ್ ಅನ್ನು ಸಾಗಿಸಲು ಯತ್ನಿಸುತ್ತಿದ್ದ ಐವರನ್ನು ಪೊಲೀಸರು ಬಂಧಿಸಿದ್ದು, ಈ ಡ್ರಗ್ಸ್​ನ ಮೌಲ್ಯ 20 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮಿಯಾವ್ ಮಿಯಾವ್ ಡ್ರಗ್ಸ್ ಎಂದೇ ಕರೆಯಲಾಗುವ ಡ್ರಗ್ಸ್ಅನ್ನು ವಶಕ್ಕೆ ಪಡೆಯಲಾಗಿದೆ.

Meow Meow Drugs worth Rs 20 crore seized in pune
ಬರೋಬ್ಬರಿ 20 ಕೋಟಿ ಮೌಲ್ಯದ ಮಿಯಾವ್ ಮಿಯಾವ್ ಡ್ರಗ್ಸ್ ವಶಕ್ಕೆ

By

Published : Oct 9, 2020, 1:33 PM IST

ಪುಣೆ(ಮಹಾರಾಷ್ಟ್ರ): ಇಲ್ಲಿನ ಪಿಂಪ್ರಿ-ಚಿನ್ವಾಡ್​ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬರೋಬ್ಬರಿ 20 ಕೋಟಿ ಮೌಲ್ಯದ ಡ್ರಗ್ಸ್ ಅನ್ನು​ ವಶಕ್ಕೆ ಪಡೆದಿದ್ದು, ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ದೇಶದಲ್ಲಿ ನಿಷೇಧಿಸಲ್ಪಟ್ಟಿರುವ ಡ್ರಗ್ಸ್ ಇದಾಗಿದ್ದು, ಇದನ್ನು ಮಿಯಾವ್ ಮಿಯಾವ್ ಡ್ರಗ್ಸ್ ಅಂತಲೂ ಕರೆಯಲಾಗುತ್ತದೆ.

ಪಿಂಪ್ರಿ-ಚಿನ್ವಾಡ್​ ಪೊಲೀಸ್ ಆಯುಕ್ತ ಕೃಷ್ಣ ಪ್ರಕಾಶ್ ಪ್ರಕಾರ, ಚಕನ್ ಪ್ರದೇಶಕ್ಕೆ ಡ್ರಗ್ಸ್​​ನೊಂದಿಗೆ ಆಗಮಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿ ಬಂದಿತ್ತು. ಈ ಹಿನ್ನೆಲೆ ದಾಳಿ ನಡೆಸಿ ಐವರನ್ನು ಬಂಧಿಸಲಾಗಿದೆ.

ನಮ್ಮ ಅಧಿಕಾರಿಗಳಿಗೆ ನಿರ್ದಿಷ್ಟ ಮಾರ್ಗದಲ್ಲಿ ಕಾರಿನ ಮೂಲಕ ಡ್ರಗ್ಸ್ ಸಾಗಿಸುತ್ತಿರುವ ಕುರಿತು ಮಾಹಿತಿ ಸಿಕ್ಕಿತ್ತು. ಬಳಿಕ ಆ ಕಾರನ್ನು ಚಕನ್ ಪ್ರದೇಶದ ಶಿಕ್ರಪೂರ್ ರಸ್ತೆಯಲ್ಲಿ ತಡೆಯಲಾಗಿತ್ತು. ಆಗ ಕಾರಿನಲ್ಲಿ ಡ್ರಗ್ಸ್ ಇರುವುದು ಪತ್ತೆಯಾಯಿತು ಎಂದು ಮಾಹಿತಿ ನೀಡಿದ್ದಾರೆ.

ಬಂಧಿತರನ್ನು ಚೇತನ್ ಫಕ್ಕಡ್, ಸಂಜೀವ್ ಕುಮಾರ್ ಬನ್ಸಿ ರಾವತ್, ಆನಂದ್​ಗಿರ್ ಗೌಸಾವಿ, ಅಕ್ಷಯ್ ಕಾಳೆ, ತೌಸಿಫ್ ಹಸನ್ ಮೊಹಮ್ಮದ್ ತಸ್ಲಿಮ್​ ಎಂದು ಗುರುತಿಸಲಾಗಿದೆ.

ಬಂಧಿತ ಐವರನ್ನು ಕೋರ್ಟ್​ಗೆ ಹಾಜರುಪಡಿಸಲಾಗಿದ್ದು, ಎಲ್ಲರನ್ನೂ 10 ದಿನ ಪೊಲೀಸ್ ಕಷ್ಟಡಿಗೆ ನೀಡಲಾಗಿದೆ.

ಗೋವಾ ಬಾಗಾ ಬೀಚ್​​​ ಬಳಿ ಡ್ರಗ್ಸ್ ಪತ್ತೆ

ಇನ್ನೊಂದು ಪ್ರಕರಣದಲ್ಲಿ ಉತ್ತರ ಗೋವಾ ಜಿಲ್ಲೆಯಲ್ಲಿ ಹೈದರಾಬಾದ್ ಮೂಲದ ಇಬ್ಬರು ವ್ಯಕ್ತಿಗಳಿಂದ 80 ಸಾವಿರ ರೂ.ಮೌಲ್ಯದ 800 ಗ್ರಾಂ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸರು ಇಲ್ಲಿನ ಬಾಗಾ ಹಮ್ಮರ್ಸ್​ ಬೀಚ್​​​ ಕ್ಲಬ್ ಬಳಿ ದಾಳಿ ನಡೆಸಿದ ವೇಳೆ ಹೈದರಾಬಾದ್ ಮೂಲದ ವಿನಯ್ ಕುಮಾರ್, ಚೈತನ್ಯ ಕೊಡೋರಿಯನ್ನು ವಶಕ್ಕೆ ಪಡೆದಿದ್ದು, ಬೈಕ್​ನಲ್ಲಿ ಗಾಂಜಾವನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ABOUT THE AUTHOR

...view details