ಕರ್ನಾಟಕ

karnataka

ETV Bharat / bharat

ಮೋದಿಗಿಂತ ಮನಮೋಹನ್ ಸಿಂಗ್ ಹೆಚ್ಚು ವಿದೇಶ ಪ್ರಯಾಣ ಮಾಡಿದ್ದಾರೆ​: ಅಮಿತ್ ಶಾ ವಿವರಣೆ! - ಅಮಿತ್​ ಶಾ ಇತ್ತೀಚಿನ ಸುದ್ದಿ

ಪ್ರಧಾನಿ ಮೋದಿ ಅವರ ವಿದೇಶ ಪ್ರಯಾಣವನ್ನ ಟೀಕಿಸುತಿದ್ದ ಕಾಂಗ್ರೆಸ್​ ನಾಯಕರಿಗೆ ಗೃಹ ಸಚಿವ ಅಮಿತ್​ ಶಾ ತಿರುಗೇಟು ಕೊಟ್ಟಿದ್ದಾರೆ.

ಮನಮೋಹನ್ ಸಿಂಗ್

By

Published : Oct 11, 2019, 8:10 AM IST

ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​​ ಪ್ರಧಾನಿ ನರೇಂದ್ರ ಮೋದಿಗಿಂತ ಹೆಚ್ಚು ವಿದೇಶ ಪ್ರಯಾಣ ಮಾಡಿದ್ದಾರೆ ಎಂದು ಕೆಂದ್ರ ಗೃಹ ಸಚಿವ ಅಮಿತ್​ ಶಾ ಹೇಳಿದ್ದಾರೆ.

ಪ್ರಧಾನಿ ಮೋದಿ ಎಲ್ಲೇ ಹೋದರು ವಿಮಾನ ನಿಲ್ದಾಣದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಮೋದಿ, ಮೋದಿ ಎಂದು ಘೋಷಣೆ ಕೂಗುತ್ತಾರೆ. ಇದು ಕಾಂಗ್ರೆಸಿಗರ ಹೊಟ್ಟೆ ಕಿಚ್ಚಿಗೆ ಕಾರಣವಾಗಿದೆ. ಹೀಗಾಗಿ ಮೋದಿ ವಿದೇಶ ಪ್ರಯಾಣವನ್ನ ಜರಿಯುತಿದ್ದಾರೆ.

ವಿಶ್ವ ಟೂರಿಸಂ ದಿನದಂದು ಮೋದಿ ವಿಮಾನ ಹತ್ತುವ ಫೋಟೋವನ್ನ ಬಳಸಿಕೊಂಡು ಕಾಂಗ್ರೆಸ್​ ಟೀಕೆ ಮಾಡಿತ್ತು. ಆದ್ರೆ ಒಂದು ದೇಶ ಮತ್ತೊಂದು ದೇಶದೊಂದಿಗೆ ಉತ್ತಮ ಸಂಪರ್ಕ ಬೆಳೆಸಿಕೊಂಡು, ಅಭಿವೃದ್ಧಿಯತ್ತ ಸಾಗಬೇಕು. ಮೋದಿ ಅದೇ ಕೆಲಸ ಮಡುತ್ತಿದ್ದಾರೆ. ಆದ್ರೆ ಕಾಂಗ್ರೆಸ್​ ನಾಯಕರು ಸುಮ್ಮನೆ ಮೋದಿ ಮೇಲೆ ಆರೋಪ ಮಾಡುತಿದ್ದಾರೆ ಎಂದಿದ್ದಾರೆ.

2011 ರಿಂದ 2014 ಕಾಂಗ್ರೆಸ್​ ಅವಧಿಯಲ್ಲಿ ಮತ್ತು 2014 ರಿಂದ 2018ರ ಬಿಜೆಪಿ ಅವಧಿಯಲ್ಲಿ ವಿದೇಶಿ ನೇರ ಬಂಡವಾಳ ಹರಿದು ಬಂದ ಪ್ರಮಾಣ ಗಮನಿಸಲಿ. ಮೋದಿ ಅವರ ವಿದೇಶ ಪ್ರಯಾಣದಿಂದ ಎಷ್ಟು ಹಣ ಬಂದಿದೆ ಎಂದು ತಿಳಿಯುತ್ತೆ ಎಂದು ಕಾಂಗ್ರೆಸ್​ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.

ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರು ಸಂಸತ್​ಗೆ ನೀಡಿರುವ ಮಾಹಿತಿ ಪ್ರಕಾರ ಪ್ರಧಾನಿ ಮೋದಿ 48 ವಿದೇಶ ಪ್ರಯಾಣ ಕೈಗೊಂಡಿದ್ದು, 55 ದೇಶಗಳಿಗೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details