ನವದೆಹಲಿ: ಆರೋಗ್ಯದ ಕಾರಣ ನೀಡಿ ಅಧಿವೇಶನಕ್ಕೆ ಗೈರಾಗಲು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ , ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ, ಆಸ್ಕರ್ ಫರ್ನಾಂಡಿಸ್, ನವನೀತ್ ಕೃಷ್ಣನ್, ನರೇಂದ್ರ ಜಾಧವ್ ಮತ್ತು ಸುಶೀಲ್ ಗುಪ್ತಾ ರಜೆ ಕೋರಿದ್ದಾರೆ.
ರಜೆ ನೀಡಲು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸದನದ ಅನುಮತಿ ಕೋರಿದ್ದಾರೆ. ಸೋಮವಾರದಿಂದ ಪ್ರಾರಂಭವಾದ ಸಂಸತ್ತಿನ ಮಾನ್ಸೂನ್ ಅಧಿವೇಶನಕ್ಕೆ ಮುಂಚಿತವಾಗಿ ನಡೆಸಿದ ಕಡ್ಡಾಯ ಆರೋಗ್ಯ ಪರೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ದ ಸಂಸದರಾದ ಮೀನಾಕ್ಷಿ ಲೇಖಿ, ಅನಂತ್ ಕುಮಾರ್ ಹೆಗ್ಡೆ ಮತ್ತು ಪರ್ವೇಶ್ ಸಾಹಿಬ್ ಸಿಂಗ್ ವರ್ಮಾ ಸೇರಿದಂತೆ ಒಟ್ಟು 17 ಸಂಸತ್ ಸದಸ್ಯರಿಗೆ ಕೋವಿಡ್ ಪಾಸಿಟಿವ್ ಬಂದಿದೆ.
ಬಿಜೆಪಿಯ 12 ಸಂದರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇನ್ನುಳಿದಂತೆ ವೈಎಸ್ಆರ್ ಕಾಂಗ್ರೆಸ್ನ ಇಬ್ಬರು, ಡಿಎಂಕೆ, ಶಿವಸೇನೆ ಮತ್ತು ರಾಷ್ಟ್ರೀಯ ಲೋಕಂತ್ರಿಕ್ ಪಕ್ಷದ ತಲಾ ಒಬ್ಬರು ಸಂಸದರಿಗೆ ಕೋವಿಡ್ ದೃಢಪಟ್ಟಿದೆ. ಕೋವಿಡ್ ಪಾಸಿಟಿವ್ ಬಂದ ಇತರ ಸಂಸದರೆಂದರೆ, ಪ್ರತಾಪ್ ರಾವ್ ಜಾಧವ್, ಜನಾರ್ದನ್ ಸಿಂಗ್, ಸುಖ್ಬೀರ್ ಸಿಂಗ್, ಹನುಮಾನ್ ಬೆನಿವಾಲ್, ಸುಕನಾತಾ ಮಜುಂದಾರ್, ಗೊಡ್ಡೇತಿ ಮಾಧವಿ, ಬಿಡಿಯುತ್ ಬಾರನ್, ಪ್ರದಾನ್ ಬರುವಾ, ಎನ್. ರೆಡ್ಡೆಪ್ಪ, ಸೆಲ್ವಂ ಜಿ., ಪ್ರತಾಪ್ ರಾವ್ ಪಾಟೀಲ್, ಸತ್ಯ ಪಾಲ್ ಸಿಂಗ್ ಮತ್ತು ರೊಡ್ಮಲ್ ನಗರ.