ಕರ್ನಾಟಕ

karnataka

ETV Bharat / bharat

ಸರ್ಕಾರಿ ಉದ್ಯೋಗ ತೊರೆದು ಮುತ್ತುಗಳ ಬೆಳೆದ: ಮುತ್ತಿನಂಥ ಬಾಳು ಕಟ್ಟಿಕೊಂಡ

ಮಧ್ಯಪ್ರದೇಶದ ರಸ್ತೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದ ಅಮಿತ್ ಬಾಮೋರಿಯ ಎಂಬುವವರು ತಮ್ಮ ಸರ್ಕಾರಿ ಕೆಲಸ ತೊರೆದು ಕೃಷಿಯಲ್ಲಿ ವಿಭಿನ್ನವಾಗಿ ಏನಾದರೂ ಮಾಡಬೇಕು ಎಂದು ಮುತ್ತು ಬೆಳೆಯಲು ಆರಂಭಿಸಿ ಸಫಲರಾಗಿದ್ದಾರೆ.

pearl
pearl

By

Published : Jun 23, 2020, 11:14 AM IST

Updated : Jun 23, 2020, 1:05 PM IST

ಹೋಶಂಗಾಬಾದ್(ಮಧ್ಯಪ್ರದೇಶ):ಸರ್ಕಾರಿ ಸಿವಿಲ್ ಎಂಜಿನಿಯರ್ ಕೆಲಸವನ್ನು ತೊರೆದ ಇಲ್ಲಿನ ಅಮಿತ್ ಬಾಮೋರಿಯ ಎಂಬುವವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದೇಶವನ್ನು ಆತ್ಮನಿರ್ಭರವನ್ನಾಗಿಸಬೇಕು ಎಂಬ ಕರೆಗೆ ಸ್ಪಂದಿಸಿದ ಇವರು, ತಮ್ಮ ಸರ್ಕಾರಿ ಕೆಲಸ ತೊರೆದು ಕೃಷಿಯಲ್ಲಿ ವಿಭಿನ್ನವಾಗಿ ಏನಾದರೂ ಮಾಡಬೇಕೆಂದು ಕೃಷಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.

ಸರ್ಕಾರಿ ಸಿವಿಲ್ ಎಂಜಿನಿಯರ್ ಹುದ್ದೆ ತೊರೆದ ರೈತ

ಹೋಶಂಗಾಬಾದ್‌ನ ಅಮಿತ್ ಬಕೋರಿಯಾ ಅವರು ಮಧ್ಯ ಪ್ರದೇಶದ ರಸ್ತೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿವಿಲ್ ಎಂಜಿನಿಯರ್ ಆಗಿದ್ದರು. ಅಂತಹ ಆರಾಮದಾಯಕವಾದ ಸರ್ಕಾರಿ ಕೆಲಸವನ್ನು ತೊರೆದ ಇವರು ತಮ್ಮ ಪೂರ್ವಜರ ಕಾಲದ ಜಮೀನಿಲ್ಲಿ ಮುತ್ತು ಬೆಳೆಯಲು ನಿರ್ಧರಿಸಿದರು.

ದೇಶವನ್ನು ಆತ್ಮನಿರ್ಭರವನ್ನಾಗಿಸಲು ಪ್ರಯತ್ನ

ಚೀನಾದಲ್ಲಿ ಮುತ್ತು ಬೆಳೆಯಲಾಗುತ್ತಿದ್ದು, ಚೀನಾದಿಂದ ಮುತ್ತುಗಳನ್ನು ದೊಡ್ಡ ಪ್ರಮಾಣದಲ್ಲಿ ಭಾರತಕ್ಕೆ ಆಮದು ಮಾಡಿಕೊಳ್ಳುವಾಗ, ಭಾರತದಲ್ಲಿ ಮುತ್ತುಗಳನ್ನು ಉತ್ಪಾದಿಸುವ ಮೂಲಕ ದೇಶಕ್ಕೆ ಸಹಾಯ ಮಾಡಲು ಅಮಿತ್ ಸಿವಿಲ್ ಎಂಜಿನಿಯರ್ ಕೆಲಸವನ್ನು ತ್ಯಜಿಸಿದರು.

ಮುತ್ತು ಬೆಳೆದ ರೈತ

ಮುತ್ತು ಉತ್ಪಾದನೆಯೊಂದಿಗೆ ಮೀನುಗಾರಿಕೆಯಲ್ಲಿ 8 ರಿಂದ 10 ಲಕ್ಷ ರೂ. ಸಂಪಾದನೆ

ಅಮಿತ್ ಕಳೆದ 4 ವರ್ಷಗಳಿಂದ ಮುತ್ತುಗಳನ್ನು ಬೆಳೆಯುತ್ತಿದ್ದಾರೆ. ಸುಮಾರು 1 ಎಕರೆ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, 8 ರಿಂದ 10 ಲಕ್ಷ ರೂಪಾಯಿಗಳನ್ನು ಗಳಿಸುತ್ತಾರೆ. ಅಮಿತ್ ತನ್ನ ಜಮೀನಿನಲ್ಲಿರುವ ಕೊಳದಲ್ಲಿ ಮುತ್ತುಗಳೊಂದಿಗೆ ಮೀನು ಹಿಡಿಯುತ್ತಾರೆ. ಇದು ಸಹ ಇವರಿಗೆ ಲಾಭವನ್ನು ತಂದು ಕೊಡುತ್ತಿದೆ.

ಸರ್ಕಾರಿ ಉದ್ಯೋಗ ತೊರೆದು ಮುತ್ತು ಬೆಳೆದ ರೈತ

ರೈತರಿಗೆ ತರಬೇತಿ

ಅಮಿತ್ ಮತ್ತು ಅವರ ಪತ್ನಿ ರೈತರಿಗೆ ಸ್ವಾವಲಂಬಿಗಳಾಗಲು ಮುತ್ತುಗಳನ್ನು ಬೆಳೆಸಲು ತರಬೇತಿ ನೀಡುತ್ತಿದ್ದಾರೆ. ಜೊತೆಗೆ ಮುತ್ತುಗಳಿಂದ ತಯಾರಿಸಿದ ಆಭರಣಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಅಮಿತ್ ಮಧ್ಯ ಪ್ರದೇಶ ಸೇರಿದಂತೆ ಇತರೆ ರಾಜ್ಯಗಳಲ್ಲಿ ರೈತರು ತಮ್ಮ ಹೊಲಗಳಲ್ಲಿ ಈ ಬೇಸಾಯವನ್ನು ಮಾಡಲು ಪ್ರೇರೇಪಿಸುತ್ತಿದ್ದಾರೆ.

ಮುತ್ತು ಬೆಳೆದ ರೈತ

ಜಲಚರ ಸಾಕಣೆಗಾಗಿ ರೈತರಿಗೆ ಮನವಿ

ಭೂಮಿಯ ನೀರಿನ ಮಟ್ಟ ನಿರಂತರವಾಗಿ ಕುಸಿಯುತ್ತಿರುವುದರಿಂದ ಅಕ್ವಾಕಲ್ಚರ್ ಮಾಡುವ ಮೂಲಕ ನೀರಿನ ಮಟ್ಟ ಹೆಚ್ಚಿಸಲು ಸಹಾಯ ಮಾಡುವಂತೆ ಅಮಿತ್ ರೈತರಿಗೆ ಮನವಿ ಮಾಡುತ್ತಿದ್ದಾರೆ.

Last Updated : Jun 23, 2020, 1:05 PM IST

ABOUT THE AUTHOR

...view details