ಕರ್ನಾಟಕ

karnataka

ETV Bharat / bharat

ಇಬ್ಬರು ಗಂಡು ಮಕ್ಕಳ ಕೊಂದು ಸಮಾಧಿ ಮಾಡಿದ ಪಾಪಿ ತಂದೆ: ಕಾರಣ ಕೇಳಿದ್ರೆ!?

ಮಾನಸಿಕ ಅಸ್ವಸ್ಥ ಎಂದು ಹೇಳಲಾಗುತ್ತಿರುವ ತಂದೆಯೊಬ್ಬ ತನ್ನ ಇಬ್ಬರು ಮಕ್ಕಳನ್ನ ಕೊಂದು ಸಮಾಧಿ ಮಾಡಿರುವ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.

Andhra Pradesh news
Andhra Pradesh news

By

Published : Oct 15, 2020, 7:05 PM IST

ಅನಂತಪುರ​(ಆಂಧ್ರಪ್ರದೇಶ): ಪಾಪಿ ತಂದೆಯೊಬ್ಬ ಇಬ್ಬರು ಗಂಡು ಮಕ್ಕಳನ್ನು ಕೊಂದು ಸಮಾಧಿ ಮಾಡಿರುವ ಅಮಾನವೀಯ ಘಟನೆ ಆಂಧ್ರಪ್ರದೇಶದ ಅನಂತಪುರದಲ್ಲಿ ನಡೆದಿದೆ.

ಪಾಪಿ ತಂದೆಯ ಅಮಾನವೀಯ ಕೃತ್ಯ

ಕಲ್ಯಾಣದುರ್ಗಂ ಮಂಡಲ್​ ಪ್ರದೇಶದ ರಂಗಪ್ಪ ಎಂಬ ವ್ಯಕ್ತಿ ತನ್ನ ಏಳು ವರ್ಷದ ಇಬ್ಬರು ಗಂಡು ಮಕ್ಕಳನ್ನು ಕೊಂದು ಸಮಾಧಿ ಮಾಡಿದ್ದಾರೆ. ಮಕ್ಕಳು ಮನೆಯಲ್ಲಿ ಇಲ್ಲದ ಕಾರಣ ತಾಯಿ ರಾಧಾ ಆತಂಕಕ್ಕೊಳಗಾಗಿ ಗ್ರಾಮಸ್ಥರ ಸಹಾಯದಿಂದ ಹುಡುಕಾಟದಲ್ಲಿ ತೊಡಗಿದ್ದಾಳೆ.

ಈ ವೇಳೆ, ರಂಗಪ್ಪನ ಮೇಲೆ ಅನುಮಾನ ವ್ಯಕ್ತಪಡಿಸಿರುವ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಕ್ಕಳನ್ನ ಸಮಾಧಿ ಮಾಡಿರುವ ಸ್ಥಳಕ್ಕೆ ಕರೆದೊಯ್ದಿದ್ದಾನೆ. ಈ ಘಟನೆ ನೋಡಿ ಎಲ್ಲರೂ ಆಘಾತಕ್ಕೊಳಗಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಈತ ಮಾನಸಿಕವಾಗಿ ಅಸ್ವಸ್ಥನಾಗಿದ್ದನು ಎಂದು ತಿಳಿದು ಬಂದಿದೆ.

ಘಟನೆ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ದೂರು ನೀಡಿದ್ದು, ಡಿಎಸ್ಪಿ ವೆಂಕಟರಮಣ, ಸಿಐ ಶಿವಶಂಕರ್​ ಘಟನಾ ಸ್ಥಳಕ್ಕೆ ಭೇಟಿ ನೀಡಿ ಆರೋಪಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ABOUT THE AUTHOR

...view details