ವಿಶಾಖಪಟ್ಟಣ(ಆಂಧ್ರಪ್ರದೇಶ): 1 ವರ್ಷದ ಮಗು ಹಾಗೂ ತನ್ನ ಪತ್ನಿಯನ್ನು ಕೊಂದ ವ್ಯಕ್ತಿವೋರ್ವ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ.
ಹೆಂಡತಿ, ಮಗುವಿನ ಕತ್ತು ಹಿಸುಕಿ ಕೊಂದ ಪಾಪಿ, ರೈಲಿನಿಂದ ಹಾರಿ ಆತ್ಮಹತ್ಯೆ - andrapradesh crime
ಒಡಿಶಾ ಮೂಲದ ಈತ ತನ್ನ ಹೆಂಡತಿ ಹಾಗೂ ಒಂದು ವರ್ಷದ ಮಗುವನ್ನು ದಾರುಣವಾಗಿ ಕತ್ತು ಹಿಸುಕಿ ಕೊಂದಿದ್ದಾನೆ. ಇದಾದ ನಂತರ ಅಲ್ಲಿಂದ ಹೊರಟು ಚಲಿಸುತ್ತಿದ್ದ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ವಿಶಾಖಪಟ್ಟಣ ಜಿಲ್ಲೆಯ ಮಧುರ್ವಾಡಾ ಎಂಬಲ್ಲಿ ಶನಿವಾರ ಈ ದುರಂತ ಸಂಭವಿಸಿದೆ. ಒಡಿಶಾ ಮೂಲದ ಸಕ್ರಜಿತ್ ಭಂಜೆ ತನ್ನ ಪತ್ನಿ ಸುಕ್ಲಾ ಹಾಗೂ ಒಂದು ವರ್ಷದ ಮಗುವನ್ನು ಕತ್ತು ಹಿಸುಕಿ ಕೊಂದು ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ 2017 ರಲ್ಲಿ ವಿವಾಹವಾಗಿದ್ದ.
ಮಗು ಹಾಗೂ ಪತ್ನಿಯನ್ನು ಕೊಂದ ನಂತರ ಇಲ್ಲಿಂದ ಕಾಲ್ಕಿತ್ತ ಸಕ್ರಜಿತ್ ಚಲಿಸುವ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಭಂಜೆ ಆಹಾರ ಇಲಾಖೆಯ ಉದ್ಯೋಗಿಯಾಗಿದ್ದನಂತೆ. ಮೃತದೇಹಗಳನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಪೊಲೀಸ್ ತನಿಖೆಯಿಂದ ಈ ಘಟನೆಗೆ ಕಾರಣ ತಿಳಿದುಬರಬೇಕಿದೆ.