ಕರ್ನಾಟಕ

karnataka

ETV Bharat / bharat

ಗೆಳತಿಗೆ ರಕ್ತವನ್ನೇ ಸಿಂಧೂರವಾಗಿ ಹಚ್ಚಿ ಕೊಲೆ ಮಾಡಿ, ತಾನೂ ಆತ್ಮೆಹತ್ಯೆಗೆ ಶರಣಾದ! - blood

ವ್ಯಕ್ತಿಯೊಬ್ಬ ತನ್ನ ರಕ್ತವನ್ನು ಸಿಂಧೂರದಂತೆ ಗೆಳತಿಯ ಹಣೆಗೆ ಹಚ್ಚಿ, ಆಕೆಯನ್ನು ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

murder

By

Published : Jul 21, 2019, 3:15 PM IST

ಮುಂಬಯಿ: 21 ವರ್ಷದ ಯುವಕನೊಬ್ಬ ಬಾಲಿವುಡ್​ ಸಿನಿಮಾ ಶೈಲಿಯಲ್ಲಿ ತನ್ನ ರಕ್ತವನ್ನೇ ಯುವತಿಯ ಹಣೆಗೆ ಹಚ್ಚಿ, ಆಕೆಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಕಲ್ಯಾಣ್​ನಲ್ಲಿ ನಡೆದಿದೆ.

ಕುಟುಂಬದವರ ಬಳಿ ತಾನು ವಾರಣಾಸಿಗೆ ಹೋಗುತ್ತಿದ್ದೇನೆ ಎಂದು ಸುಳ್ಳು ಹೇಳಿ, ಮುಂಬಯಿಗೆ ಆಗಮಿಸಿ ಗೆಳತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವ್ಯಕ್ತಿಯನ್ನು ಉತ್ತರ ಪ್ರದೇಶದ ಅರುಣ್ ಗುಪ್ತ ಹಾಗೂ ಆತನ ಗೆಳತಿಯನ್ನು ಪ್ರತಿಭಾ ಪ್ರಸಾದ್ ಎಂದು ಗುರುತಿಸಲಾಗಿದೆ. ರಕ್ತವನ್ನು ಗೆಳತಿಯ ಹಣೆಗೆ ಹಚ್ಚಿ, ಆಕೆಯೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾನೆ. ಬಳಿಕ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ, ತಾನು ಫ್ಯಾನ್​ಗೆ ನೇಣು ಹಾಕಿಕೊಂಡಿದ್ದಾನೆ ಎಂದು ಮಹಾತ್ಮಾ ಫುಲೆ ಪೊಲೀಸ್ ಠಾಣೆಯ ಇನ್​ಸ್ಪೆಕ್ಟರ್ ಪಿ.ಆರ್.ಲೋಂಧೆ ಹೇಳಿದ್ದಾರೆ.

ಈ ಘಟನೆ ಅತಿಥಿ ಗೃಹದಲ್ಲಿ ನಡೆದಿದ್ದು, ಮಧ್ಯಾಹ್ನ 1.30ಕ್ಕೆ ಆಗಮಿಸಿದ ಜೋಡಿ ರಾತ್ರಿ 9.30 ಕಳೆದರೂ ಊಟಕ್ಕೆ ಬಾರದ್ದನ್ನು ಕಂಡು ಅತಿಥಿ ಗೃಹದ ಸಿಬ್ಬಂದಿ ಕೊಠಡಿಗೆ ತೆರಳಿದ್ದಾನೆ. ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪೊಲೀಸರಿಗೆ ವಿಷಯ ತಿಳಿಸಲಾಗಿದೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲು ಒಡೆದು ಕೊಠಡಿಯೊಳಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕೊಲೆಯ ಹಿಂದಿನ ಕಾರಣ ಇನ್ನೂ ಪತ್ತೆಯಾಗಿಲ್ಲ.

ABOUT THE AUTHOR

...view details