ಕರ್ನಾಟಕ

karnataka

ETV Bharat / bharat

ಲೈಂಗಿಕ ಕಿರುಕುಳ ನೀಡಿದ ಆರೋಪ... ಬೆತ್ತಲೆಗೊಳಿಸಿ ಸೆಕ್ಯುರಿಟಿ ಗಾರ್ಡ್​ನ ಥಳಿಸಿದ ಸ್ಥಳೀಯರು! - ಸೆಕ್ಯುರಿಟಿ

ಅಪ್ರಾಪ್ತೆಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಸೆಕ್ಯುರಿಟಿ ಗಾರ್ಡ್​ವೋರ್ವನನ್ನ ಬೆತ್ತಲೆ ಮಾಡಿ ಥಳಿಸಿರುವ ಘಟನೆ ನಡೆದಿದೆ.

ಬೆತ್ತಲೆಗೊಳಿಸಿ ಸೆಕ್ಯುರಿಟಿ ಥಳಿತ

By

Published : Jul 15, 2019, 8:59 PM IST

ಪಾಲ್ಗರ್​​(ಮಹಾರಾಷ್ಟ್ರ): ಆರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಅಪಾರ್ಟ್​ಮೆಂಟ್​ ಸೆಕ್ಯುರಿಟಿಯೋರ್ವನನ್ನ ಬೆತ್ತಲೆಗೊಳಿಸಿ ಥಳಿಸಿರುವ ಘಟನೆ ಮಹಾರಾಷ್ಟ್ರದ ಪಾಲ್ಗರ್​​ನಲ್ಲಿ ನಡೆದಿದೆ.

ರವಿವಾರ ರಾತ್ರಿ ಈ ಘಟನೆ ನಡೆದಿದ್ದು, ಇದು ತಿಳಿಯುತ್ತಿದ್ದಂತೆ ಕೆಲವರು ಸೇರಿ ಆತನ ಮೇಲೆ ಹಲ್ಲೆ ನಡೆಸಿ ಬೆತ್ತಲೆಗೊಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಆತನನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಬೆತ್ತಲೆಗೊಳಿಸಿ ಸೆಕ್ಯುರಿಟಿ ಥಳಿತ

ಟ್ಯೂಷನ್​ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕಿಯನ್ನ ಸೆಕ್ಯುರಿಟಿ ಗಾರ್ಡ್​ ಕೆಟ್ಟದಾಗಿ ಟಚ್​ ಮಾಡಿದ್ದಾನೆ ಎಂದು ಬಾಲಕಿ ತಾಯಿ ದೂರಿನಲ್ಲಿ ತಿಳಿಸಿದ್ದಾಳೆ. ಪೊಲೀಸರು ಸೆಕ್ಯುರಿಟಿ ಗಾರ್ಡ್​ ವಿರುದ್ಧ ಪೋಕ್ಸೋ ಕಾಯ್ದೆಯಡಿ ದೂರು ದಾಖಲು ಮಾಡಿಕೊಂಡಿದ್ದಾರೆ. ಸೆಕ್ಯುರಿಟಿ ಮೇಲೆ ಹಲ್ಲೆ ಮಾಡಿರುವವರ ವಿರುದ್ಧ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ತಿಳಿದು ಬಂದಿದೆ.

ABOUT THE AUTHOR

...view details