ಕರ್ನಾಟಕ

karnataka

ETV Bharat / bharat

ಕೋವಿಡ್ ಸೋಂಕಿತರಿಗಾಗಿ ಔಷಧ, ವೆಂಟಿಲೇಟರ್​ ಒದಗಿಸುವಂತೆ ಕೇಂದ್ರಕ್ಕೆ ಮಹಾರಾಷ್ಟ್ರ ಬೇಡಿಕೆ - ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕು

ದೇಶದಲ್ಲೇ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದಿರುವ ಮಹಾರಾಷ್ಟ್ರಕ್ಕೆ ಕೇಂದ್ರ ಸರ್ಕಾರ ಕಡಿಮೆ ಬೆಲೆಯಲ್ಲಿ ಔಷಧ ಮತ್ತು 500 ವೆಂಟಿಲೇಟರ್​ಗಳನ್ನು ಒದಗಿಸಬೇಕೆಂದು ಮಾಹಾರಾಷ್ಟ್ರ ಆರೋಗ್ಯ ಸಚಿವರು ಕೇಳಿಕೊಂಡಿದ್ದಾರೆ.

Maha demands COVID-19 drugs
ಆರೋಗ್ಯ ಸಚಿವ ರಾಜೇಶ್ ಟೊಪೆ

By

Published : Jun 17, 2020, 10:19 PM IST

ಮುಂಬೈ: ಮಹಾರಾಷ್ಟ್ರ ಸರ್ಕಾರ ಕೋವಿಡ್ -19 ಚಿಕಿತ್ಸಾ ಔಷಧಿಗಳನ್ನು ಕಡಿಮೆ ದರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಿದೆ.

ಈ ಬಗ್ಗೆ ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ, ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕೇಂದ್ರವು ಹೆಚ್ಚುವರಿಯಾಗಿ 500 ವೆಂಟಿಲೇಟರ್‌ಗಳನ್ನು ಒದಗಿಸಬೇಕೆಂದು ಹೇಳಿದ್ದಾರೆ.

ಐಸಿಎಂಆರ್ ಸಹಾಯದಿಂದ ಕೋವಿಡ್-19 ರೋಗಿಗಳಿಗೆ ಕೇಸ್-ಟು-ಕೇಸ್ ಆಧಾರದ ಮೇಲೆ ಚಿಕಿತ್ಸೆ ನೀಡಲು ನಾವು ರೆಮ್ಡೆಸಿವಿರ್ ಮತ್ತು ಟೊಸಿಲಿಜುಮಾಬ್ ಔಷಧಿಗಳನ್ನು ನೀಡುತ್ತಿದ್ದೇವೆ. ಆದರೆ ಈ ಔಷಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ರೋಗಿಗಳ ಚಿಕಿತ್ಸೆಗಾಗಿ ಸಮಂಜಸವಾದ ಬೆಲೆಯಲ್ಲಿ ಕೇಂದ್ರ, ರಾಜ್ಯ ಸರ್ಕಾರಕ್ಕೆ ನೀಡಬೇಕು ಎಂದಿದ್ದಾರೆ.

ಕೇಂದ್ರದಿಂದ ನಮಗೆ ಇರುವ ಮತ್ತೊಂದು ಬೇಡಿಕೆಯೆಂದರೆ, ರಾಜ್ಯದಾದ್ಯಂತ ಆಸ್ಪತ್ರೆಗಳು ಮತ್ತು ವೈದ್ಯಕೀಯ ಕಾಲೇಜುಗಳಿಗೆ ಹೆಚ್ಚುವರಿಯಾಗಿ 500 ವೆಂಟಿಲೇಟರ್‌ಗಳನ್ನು ಪೂರೈಸಬೇಕು ಎಂದಿದ್ದಾರೆ.

ABOUT THE AUTHOR

...view details