ಮುಂಬೈ:288 ಕ್ಷೇತ್ರಗಳಿಗೆ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ 162 ಕ್ಷೇತ್ರಗಳಲ್ಲಿ ಗೆಲುವಿನ ದಾಖಲೆ ಮಾಡಿದ್ದು, ಮತ್ತೊಂದು ಅವಧಿಗೆ ಸರ್ಕಾರ ರಚನೆ ಮಾಡುವುದು ಕನ್ಫರ್ಮ್ ಆಗಿದೆ.
ಈ ನಡುವೆಯೂ ಕೂಡ ದೇವೇಂದ್ರ ಫಡ್ನವಿಸ್ ಸರ್ಕಾರದಲ್ಲಿ ಸಚಿವರಾಗಿದ್ದ ಏಳು ಅಭ್ಯರ್ಥಿಗಳಿಗೆ ಮಹಾರಾಷ್ಟ್ರದ ಜನರು ಸೋಲಿನ ರುಚಿ ತೋರಿಸಿದ್ದಾರೆ. ಪ್ರಮುಖವಾಗಿ ಪರ್ಲಿಯಿಂದ ಸ್ಪರ್ಧಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಪಂಕಜಾ ಮುಂಡೆ ತಮ್ಮ ಸೋದರ ಸಂಬಂಧಿ ವಿರುದ್ಧವೇ ಹೀನಾಯ ಸೋಲು ಕಂಡಿದ್ದಾರೆ. ವರ್ಲಿಯಿಂದ ಎನ್ಸಿಪಿಯ ಧನಂಜಯ್ ಮುಂಡೆ ವಿರುದ್ಧ ಸುಮಾರು 28 ಸಾವಿರ ಮತಗಳಿಂದ ಪರಾಭವ ಹೊಂದಿದ್ದಾರೆ.